Published On: Thu, Jan 30th, 2025

ಚಿಂತೆಯಂತೆ ಕಾಡಿದ ಗೊಂದಲಗಳಿಗೆ ಬೆಳಕು ನೀಡಿದ ನಾರಾಯಣಗುರುಗಳು : ಸಂಜೀವ ಪೂಜಾರಿ

ಬಂಟ್ವಾಳ : ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆಯ ವಿರುದ್ಧ ಸಂಘರ್ಷರಹಿತವಾದ ಸುಧಾರಣಾ ಕ್ರಾಂತಿಯನ್ನು ರೂಪಿಸಿ ಆ ಮೂಲಕ ಯಶಸ್ವಿಯಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ಪ್ರತಿಯೊಂದು ಅನುಷ್ಠಾನ ಹಾಗೂ ಚಿಂತನೆಗಳು ಚಿಂತೆಯಂತೆ ಕಾಡುತ್ತಿರುವ ವರ್ತಮಾನದ ಗೊಂದಲಗಳಿಗೆ ಸೂಕ್ತ ಪರಿಹಾರವಾಗ ಬಲ್ಲ ಬೆಳಕಿನ ಮೌಲ್ಯವನ್ನು ಹೊಂದಿದೆ ಎಂದು  ಸಜೀಪ ಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ತಿಳಿಸಿದ್ದಾರೆ.

ಯುವವಾಹಿನಿ ಬಂಟ್ವಾಳ ಘಟಕದ ಸಂಘಟನಾ ಕಾರ್ಯದರ್ಶಿ ಸೃಜನಿ ಇವರ ಬೊಳ್ಳಾಯಿ ಶಿವಗಿರಿ ನಿವಾಸದಲ್ಲಿ ನಡೆದ ಗುರುತತ್ವವಾಹಿನಿ  ಮಾಲಿಕೆ 30 ರಲ್ಲಿ ಗುರುಸಂದೇಶ ನೀಡಿ ಅವರು ಮಾತನಾಡಿದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಸಜಿಪ ಮೂಡ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಅನ್ನಪ್ಪಾಡಿ, ಸಜಿಪಮೂರ್ತೆದಾರರ ಸಹಕಾರಿ ಸೇವಾ ಸಂಘದ ನಿರ್ದೇಶಕ ಶಂಕರ್ ಕಂಸಾಲೆ, ಮೋಹನ್‌ದಾಸ್ ಬೊಳ್ಳಾಯಿ, ಯುವವಾಹಿನಿ ಬಂಟ್ವಾಳ ಘಟಕದ  ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಕಿರಣ್ ಪೂಂಜರೆಕೋಡಿ, ಮಧುಸೂದನ್ ಮಧ್ವ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರ, ರಾಜೇಶ್ ಸುವರ್ಣ, ಗಣೇಶ್ ಪೂಂಜರಕೋಡಿ, ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ, ಅರುಣ್ ಬಿ.ಸಿರೋಡ್ ,ಸದಸ್ಯರಾದ ನವೀನ್ ಬಿ.ಸಿರೋಡ್, ಸುನಿಲ್ ಸುವರ್ಣ ಮರ್ದೊಳಿ, ಯತೀಶ್ ಬೊಳ್ಳಾಯಿ, ಶೈಲೇಶ್ ಕುಚ್ಚಿಗುಡ್ಡೆ, ಸತೀಶ್ ಬಾಯಿಲ, ನಾಗೇಶ್ ಏಲಬೆ, ವಿಘ್ನೇಶ್ ಬೊಳ್ಳಾಯಿ, ಅರ್ಜುನ್ ಅರಳ, ಪ್ರಶಾಂತ್ ಏರಮಲೆ, ಯಶೋಧರ ಕಡಂಬಲ್ಕೆ, ಯೋಗೀಶ್ ಕಲ್ಲಡ್ಕ, ಭವಾನಿ ನಾರಾಯಣ ಅಮೀನ್, ಸುನೀತಾ ನಿತಿನ್,ಸುಲತಾ ಬಿ.ಸಿರೋಡ್, ಶ್ರೇಯಾ ಬೊಳ್ಳಾಯಿ, ಸಜಿಪ ನಾರಾಯಣಗುರು ಜ್ಞಾನ ಮಂದಿರದ ಸದಸ್ಯರು ಉಪಸ್ಥಿತರಿದ್ದರು

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter