ವೀರಕಂಭ ಶ್ರೀ ಗಿಲ್ಕಿಂಜತಾಯಿ ದೈವದ ದೊಂಪದ ಬಲಿ ನೇಮೋತ್ಸವ
ಬಂಟ್ವಾಳ : ಇಲ್ಲಿಯ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಗಿಲ್ಕಿಂಜತಾಯಿ ದೇವಸ್ಥಾನದ ಜಾತ್ರಾ ಮಹೋತ್ಸವದ ಪೂರ್ವ ಬಾವಿಯಾಗಿ ನಡೆಯುವ ಶ್ರೀ ದೈವದ ದೊಂಪದ ಬಲಿ ನೇಮಹೋತ್ಸವವು ವೀರಕಂಭ ಗ್ರಾಮದ ಮೈರಾ ಪೆರಿಮಾರು ಗದ್ದೆಯಲ್ಲಿ ಮಂಗಳವಾರ ಬೆಳಿಗ್ಗೆ ಸಂಭ್ರಮದಿಂದ ಜರಗಿತು.

ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡೊಗುತ್ತು ಹಾಗೂ ಗ್ರಾಮಸ್ಥರು ಹಾಗೂ ವಿವಿದೆಢಯ ಭಕ್ತಾದಿಗಳು ಆಗಮಿಸಿ ದೈವದಗಂಧ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವೀರಕಂಬ ಮಾತ್ರಶ್ರೀ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಮಾಡಿದರು.