ಜ.31 ರಂದು ಕಳ್ಳಿಗೆಗುತ್ತು ಚಾವಡಿಯಲ್ಲಿ “ಧರ್ಮನೇಮ”
ಬಂಟ್ವಾಳ: ತಾಲೂಕಿನ ಕಳ್ಳಿಗೆಗುತ್ತು ಚಾವಡಿಯಲ್ಲಿ ಶ್ರೀಕನಪಾಡಿತ್ತಾಯ,ಧೂಮಾವತಿ-ಬಂಟ ಹಾಗೂ ಪರಿವಾರ ದೈವಗಳ “ಧರ್ಮನೇಮೋತ್ಸವವು” ಬ್ರಹ್ಮಶ್ರೀ ವೇ.ಮೂ.ಪೊಳಲಿ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಜ.31 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅಂದು ಬೆಳಿಗ್ಗೆ ಪಲ್ಲಮಜಲುಗುತ್ತು ಚಾವಡಿಯಿಂದ ದೈವಗಳ ಭಂಡಾರವು ಪೆರಿತೋಡಿಬೀಡುವಿಗೆ ಬರಲಿದ್ದು,ಬಳಿಕ ಇಲ್ಲಿ ಕನಪಾಡಿ ದೈವಕ್ಕೆ ಹೋಮ ,ಪಂಚಕಜ್ಜಾಯ,ಪರ್ವಸೇವೆ ನಡೆಯಲಿದೆ.
ತದನಂತರ ಅನುಜ್ಞಾ ಪ್ರಾರ್ಥನೆಯಾಗಿ ಇಲ್ಲಿಂದ ದೈವಗಳ ಭಂಡಾರ ಕಳ್ಳಿಗೆಗುತ್ತಿಗೆ ಹೊರಡಲಿದೆ.ಕಳ್ಳಿಗೆ ಗುತ್ತು ಚಾವಡಿಯಲ್ಲಿ
ಶ್ರೀಕನಪಾಡಿತ್ತಾಯ,ಧೂಮಾವತಿ-ಬಂಟ ಹಾಗೂ ಪರಿವಾರ ದೈವಗಳಿಗೆ ಕಲಶಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ,ನಿರಂತರ ಮಹಾ ಅನ್ನಸಂತರ್ಪಣೆ ನೆರವೇರಲಿದೆ.
ಸಂಜೆ ಕಳ್ಳಿಗೆ ಚಾವಡಿಯಿಂದ ದೈವಗಳ ಭಂಡಾರವು ನೇಮಚಪ್ಪರಕ್ಕೆ ಅಗಮಿಸಲಿದ್ದು,ರಾತ್ರಿ 8 ಗಂಟೆಯಿಂದ ದೈವಗಳ ಧರ್ಮನೇಮೋತ್ಸವದ ಗಗ್ಗರ ಸೇವೆ ನಡೆಯಲಿದೆ.ಫೆ.1 ರಂದು ಕಳ್ಳಿಗೆಗುತ್ತು ಮನೆಯ ಪರಿವಾಎ ದೈವಗಳಿಗೆ ಕೋಲೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ