ಮಂಗಳೂರು: ನೆತ್ತರೆಕೆರೆ ಸಿನಿಮಾ ಚಿತ್ರೀಕರಣದ ವೇಳೆ ಸೆಟ್ನಲ್ಲಿ ಬೆಂಕಿ

ಮಂಗಳೂರು: ಸಿನಿಮಾ ಚಿತ್ರೀಕರಣದ ಸೆಟ್ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಮಂಗಳೂರು ಹೊರವಲಯದಲ್ಲಿ ನಡೆಯುತ್ತಿದ್ದ ತುಳು/ಕನ್ನಡ ಸಿನಿಮಾ ಚಿತ್ರೀಕರಣದ ವೇಳೆ ನಡೆದಿದೆ. ನೆತ್ತರಕೆರೆ ಹೆಸರಿನಲ್ಲಿ ಮೂಡಿ ಬರುತ್ತಿರುವ ತುಳು ಮತ್ತು ಕನ್ನಡ ಭಾಷೆಯ ಸಿನಿಮಾ.
ಸಿನಿಮಾ ಚಿತ್ರೀಕರಣಕ್ಕಾಗಿ ಹಾಕಿದ್ದ ಬಾರ್ ನ ಸೆಟ್ ನಲ್ಲಿ ದಿಢೀರ್ ಅಗ್ನಿ ಕಾಣಿಸಿಕೊಂಡಿದೆ. ಬಾರ್ ನ ಅಡುಗೆ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡು ಬಾರ್ ಸೆಟ್ ಅಗ್ನಿಗಾಹುತಿಯಾಗಿದೆ.
ಚಿತ್ರ ತಂಡ ತಕ್ಷಣ ಟ್ಯಾಂಕರ್ ನಲ್ಲಿ ನೀರು ತಂದು ಬೆಂಕಿ ಆರಿಸಿದ್ದಾರೆ. ಬಾರ್ ಸೆಟ್ ನ ಒಂದು ಭಾಗ ಪೂರ್ಣ ಬೆಂಕಿಗಾಹುತಿಯಾಗಿದೆ. ಕಾಂತಾರ ಸಿನಿಮಾದ ‘ಗುರುವ’ ಖ್ಯಾತಿಯ ಸ್ವರಾಜ್ ಶೆಟ್ಟಿ ನಟನೆಯ ಚಿತ್ರ ಇದ್ದಾಗಿದೆ. ಸ್ವರಾಜ್ ಶೆಟ್ಟಿ ನೆತ್ತರೆಕೆರೆ ಚಿತ್ರದ ಚಿತ್ರಕಥೆ ಹಾಗೂ ನಿರ್ದೇಶನ ಕೂಡ ಮಾಡಿದ್ದಾರೆ.