ಜೇನು ತರಬೇತಿ ಕಾರ್ಯಕ್ರಮ
ಬಂಟ್ವಾಳ: ತೋಟಗಾರಿಕೆ ಇಲಾಖೆ ಬಂಟ್ವಾಳ ಹಾಗೂ ಬಂಟ್ವಾಳ ಸಂಜೀವಿನಿ ಮಹಿಳಾ ಕಿಸನ್ ಪ್ರೊಡ್ಯೂಸರ್ ಕಂಪೆನಿ ಇದರ ಸಹಯೋಗದಲ್ಲಿ ಜೇನು ತರಬೇತಿ ಕಾರ್ಯಕ್ರಮ ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಬಂಟ್ವಾಳ ಸಂಜೀವಿನಿ ಮಹಿಳಾ ಕಿಸನ್ ಪ್ರೊಡ್ಯೂಸರ್ ಕಂಪೆನಿ ಅಧ್ಯಕ್ಷೆ ಶೋಭಾ ಉದ್ಘಾಟಿಸಿದರು. ತೋಟಗಾರಿಕಾ ಇಲಾಖೆಯ ಹಿರಿಯಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ, ಕಂಪೆನಿಯ ಸಿಇಓ ನವ್ಯ ಹೊಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಧಕೃಷ್ಣ ಬೆಟ್ಟಂಪಾಡಿ ತರಬೇತಿ ನೀಡಿದರು. ಲಕ್ಷ್ಮಣ ಗೌಡ ಕಿನ್ನಿಬೆಟ್ಟು ಪ್ರಾಯೋಗಿಕ ತರಬೇತಿ ನೀಡಿದರು.