Published On: Wed, Jan 22nd, 2025

ಮಗಳ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ  ಲಯನ್ ಗಣೇಶ್ ಪೂಜಾರಿ

ಬಂಟ್ವಾಳ : ಹುಟ್ಟು ಹಬ್ಬದ ಆಚರಣೆಯಲ್ಲೂ ಪಾಶ್ಚಾತ್ಯ ಸಂಸ್ಕೃತಿಯು ಆವರಿಸಿಕೊಂಡಿರುವ ಕಾಲಘಟ್ಟವಿದು, ಆಪ್ತೇಷ್ಟರನ್ನು  ಕರೆದು ವೈಭವೋಪೇತವಾಗಿ ಹುಟ್ಟು ಹಬ್ಬವನ್ನು ಆಚರಿಸುವುದು ಎಲ್ಲಾ ಕಡೆಯೂ ಪ್ರಚಲಿತದಲ್ಲಿದೆ. ಆದರೆ “ಸೇವೆಯ ಕನಸುಗಳಿಗೆ ಭಾವಗಳು ನೂರಾರು” ಎಂಬ ಮಾತಿನಂತೆ ತನ್ನ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ಮೀಸಲಿಸಿಕೊಳ್ಳಬೇಕೆಂಬ ಧ್ಯೇಯವನ್ನು ಹೊಂದಿರುವ ಬಂಟ್ವಾಳ ತಾಲೂಕಿನ ಕೊಡಾಜೆ ಶ್ರೀ ಸಾಯಿ ಇಂಜಿನಿಯರಿಂಗ್ ವರ್ಕ್ಸ್ನ  ಮಾಲಕರಾದ ಲ.ಗಣೇಶ್ ಪೂಜಾರಿ ಹಾಗೂ ಮನೆಯವರು ತಮ್ಮ ಮಗಳಾದ ಕು. ಶಾರ್ವಿಯ 5 ನೇ ವರ್ಷದ ಹುಟ್ಟು ಹಬ್ಬವನ್ನು ಸರಕಾರಿ ಶಾಲೆಗಳಿಗೆ ಉಪಯುಕ್ತ ಸಾಮಗ್ರಿಗಳನ್ನು ವಿತರಿಸುವ ಮೂಲಕ ಆಚರಿಸಿಕೊಂಡು  ಮಾದರಿಯಾಗಿದ್ದಾರೆ.

ಹುಟ್ಟು ಹಬ್ಬದ ಪ್ರಯುಕ್ತ ಏಮಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಮಿತ್ತಪೆರಾಜೆ ಅಂಗನವಾಡಿ  ಪುಟಾಣಿಗಳಿಗೆ ಊಟದ ತಟ್ಟೆ ಹಾಗೂ ಮಲ್ಲಡ್ಕ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸ್ಟೀಲ್ ಲೋಟಗಳನ್ನು ಕೊಡುಗೆಯಾಗಿ ನೀಡುವುದರೊಂದಿಗೆ ಪತ್ರಿಯ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಏಮಾಜೆ ಕಿರಿಯ ಪ್ರಾಥಮಿಕ ಶಾಲೆಗೆ ತನ್ನ ಕುಟುಂಬ ಸಮೇತ ಭೇಟಿ ನೀಡಿ  ಶಾಲೆಯ ಎಲ್ಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ, ವಿತರಿಸಿ, ಜೊತೆಗೆ ಮಕ್ಕಳಿಗೆ ಇಷ್ಟವಾದ  ಐಸ್ ಕ್ರೀಮ್ ನೀಡಿ ಸರಳ ಕಾರ್ಯಕ್ರಮದೊಂದಿಗೆ ಹುಟ್ಟುಹಬ್ಬ ಆಚರಿಸಿದರು.


ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಸ್ವಾಗತಿಸಿ, ಸಹ ಶಿಕ್ಷಕ ಉದಯಚಂದ್ರ ರವರು ವಂದಿಸಿ ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿ. ಶಿಕ್ಷಕಿ ದೀಕ್ಷಾ ಸಹಕರಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter