ಕುಪ್ಪೆಪದವು ಪ್ರೌಢಶಾಲೆಯಲ್ಲಿ ಯೆನೆಪೋಯ ಸಂಸ್ಥೆಯಿಂದ ರಾಷ್ಟ್ರೀಯ ಸೇವಾ ಶಿಬಿರ
ಕೈಕಂಬ: ಮಂಗಳೂರಿನ ಯೆನೆಪೋಯ ವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳಿಂದ ಕುಪ್ಪೆಪದವಿನ ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆಯಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಸಮಾಜ ಸೇವಾ ಶಿಬಿರವನ್ನು ಪ್ರೌಢ ಶಾಲಾ ಶೈಕ್ಷಣಿಕ ಸಮಿತಿಯ ಅಧ್ಯಕ್ಷ ದಿನೇಶ್ ಕುಮಾರ್ ಬಳ್ಳಾಲ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಉನ್ನತ ಶಿಕ್ಷಣ ಸಂಸ್ಥೆಗಳು ಇಂತಹ ಸಮಾಜಮುಖಿ ಕಾರ್ಯಗಳನ್ನು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಯಶಸ್ವಿಯಾಗಿ ನಡೆಸಿದಾಗ, ಶಾಲಾಭಿವೃದ್ದಿಯ ಜೊತೆಗೆ ಪರಿಸರ ಹಾಗೂ ಸಮುದಾಯವೂ ಕೂಡಾ ಜಾಗೃತವಾಗುತ್ತದೆ. ಧಾರ್ಮಿಕ ಸೇವೆಗಿಂತಲೂ ಮಿಗಿಲಾದ ಈ ಸೇವೆಯು ಹೆಚ್ಚು ಪುಣ್ಯದ ಕೆಲಸ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಮಾತನಾಡಿ, ನಗರ ಪ್ರದೇಶದ ಕಾಲೇಜು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಈ ಪ್ರೌಢಶಾಲೆಯನ್ನು ಆಯ್ಕೆ ಮಾಡಿ, ಈ ಪರಿಸರದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಲು ಕಾರ್ಯಪ್ರವೃತ್ತರಾದ ಯೆನೆಪೋಯ ಸಂಸ್ಥೆಯನ್ನು ಶ್ಲಾಘಿಸಿದರು. ಕುಪ್ಪೆಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಜೆ, ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಶೇಖ್ ಅಬ್ದುಲ್ಲಾ ಶಿಬಿರಕ್ಕೆ ಶುಭ ಹಾರೈಸಿ ಮಾತನಾಡಿದರು.

ಪ್ರೌಢ ಶಾಲಾ ಮುಖ್ಯ ಶಿಕ್ಷಕಬಾಬು ಪಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಎಸ್.ಡಿ. ಎಂ. ಸಿ. ಮಾಜಿ ಅಧ್ಯಕ್ಷ ಶೇಕ್ ಅಬ್ದುಲ್ಲಾ , ಹರಿಶ್ಚಂದ್ರ ಕಜೆ, ಕುಪ್ಪೆಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಅಗರಿ, ಸದಸ್ಯರಾದ ಶಶಿಧರ್ ಶೆಟ್ಟಿ, ಶಿಕ್ಷಕರುಗಳಾದ ಉದಯಕುಮಾರ್, ಶ್ರೀ ಮಾರ್ಕ್ ಮೆಂಡೊನ್ಸಾ ಉಪಸ್ಥಿತರಿದ್ದರು. ಶಿಬಿರದ ಯೋಜನಾಧಿಕಾರಿ ಶ್ರೀಮತಿ ಪ್ರಿಯ ಸ್ವಾಗತಿಸಿದರು. ಸಿಂಚನ ಕಾರ್ಯಕ್ರಮ ನಿರ್ವಹಿಸಿ, ನಿಖಿತಾ ವಂದಿಸಿದರು.