ಕುಮ್ಡೇಲು ಸರಕಾರಿ ಪ್ರಾಥಮಿಕ ಶಾಲೆಗೆ 7 ದಿನದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟ ಎನ್ ಎಸ್ ಎಸ್ ವಿದ್ಯಾರ್ಥಿಗಳು
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಕುಮ್ಡೇಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕಾಗಮಿಸಿದಯೆನೆಪೋಯ ಫಿಸಿಯೋಥೆರಪಿ ಕಾಲೇಜಿನ
ವಿದ್ಯಾರ್ಥಿಗಳು ಈ ಶಾಲೆಗೆ ಎರಡು ಶೌಚಾಲಯ ಮತ್ತು ಶೌಚಾಲಯ ಗುಂಡಿ ಅಲ್ಲದೆ ಜರಿದು ಬಿದ್ದಿದ್ದ ಆವರಣ ಗೋಡೆ ಯನ್ನು ನಿರ್ಮಿಸಿಕೊಟ್ಟು ಗಮನಸೆಳೆದಿದ್ದಾರೆ.

ಶಿಬಿರಾರ್ಥಿಗಳು ಈ ಶಾಲೆಯ ಶೌಚಾಲಯ ನಾದುಸ್ಥಿಯಲ್ಲಿರುವುದನ್ನು ಗಮನಿಸಿ ಏಳು ದಿನಗಳ ಕಾಲ ನಡೆದ ಶಿಬಿರದಲ್ಲಿ ನೂತನವಾಗಿ ಎರಡು ಶೌಚಾಲಯ ಮತ್ತು ಶೌಚಾಲಯ ಗುಂಡಿ ಮಾತ್ರವಲ್ಲ ಜರಿದು ಬಿದ್ದಿದ್ದ ಆವರಣ ಗೋಡೆಯನ್ನು ನಿರ್ಮಿಸಿಕೊಟ್ಟು ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶಾಲೆಯ ಮೂಲಭೂತ ಸೌಕರ್ಯದಲ್ಲೊಂದಾದ ಶೌಚಾಲಯ ದುರಸ್ಥಿಗೆಕಳೆದ ಮೂರು ವರ್ಷಗಳಿಂದ ಸ್ಥಳೀಯ ಪಂಚಾಯತ್ ಗೆ ಮನವಿ ಸಲ್ಲಿಸಲಾಗಿತ್ತದರೂ ಇದಕ್ಕೆ ಸೂಕ್ತ ಸದೊಂದನ ದೊರಕಿರಲಿಲ್ಲ,ಇದೀಗ ಶಾಲೆಗೆ ಎನ್ ಎಸ್ ಎಸ್ ಶಿಬಿರಕ್ಕಾಗಿ ಬಂದಿದ್ದ ಯೆನೆಪೋಯ ಫಿಸಿಯೋಥೆರಪಿ ಕಾಲೇಜಿನವಿದ್ಯಾರ್ಥಿಗಳು ಇದನ್ನು ಗಮನಿಸಿ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದು,ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಈ ಕಾರ್ಯಕ್ಕೆ ಶಾಲಾ ಮುಖ್ಯ ಶಿಕ್ಷಕಿ ಬಾವುಕರಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಯೆನೆಪೋಯ ಫಿಸಿಯೋಥೆರಪಿ ಕಾಲೇಜ್ ನ ಪ್ರಾಂಶುಪಾಲರಾದ ಪ್ರೊ ಲೂದ್ರ್ ರಾಜ್ ರವರು ಶಿಬಿರಾರ್ಥಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಅಶೀರ್ ಜೋನ್ ಸ್ಯಾಮುಯೆಲ್ , ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕಿ ಡಾ ಅಶ್ವಿನಿ ಎಸ್ ಶೆಟ್ಟಿ ,ಇಂಜಿನಿಯರ್ ಹಾಗು ಗುತ್ತಿಗೆದಾರರಾದ ತಾರಾನಾಥ ಕೊಟ್ಟಾರಿ ತೇವು , ಶಾಲಾ ಸಂಸ್ಥಾಪಕರಾದ ಭಾಸ್ಕರ ಚೌಟ ಕುಮ್ಡೇಲು , ಪುದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ , ಸ್ಥಳೀಯ ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ , ಸಾಮಾಜಿಕ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ , ಶಾಲಾ ಮುಖ್ಯ ಶಿಕ್ಷಕಿ ಬೃಂದಾ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಲಾವತಿ ,ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್ ಪೂಜಾರಿ ಶಿಬಿರದ ಮೇಲ್ವಿಚಾರಕರಾದ ಸ್ವಾತಿ ಮತ್ತು ಶಿಫಾಲಿ ಉಪಸ್ಥಿತರಿದ್ದರು