ಶ್ರೀ ಕ್ಷೇ. ಧ.ಗ್ರಾ. ಯೋ. ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಚತಾ ಕಾರ್ಯ, ಮಾಸಿಕ ಸಭೆ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಬಂಟ್ವಾಳ ತಾಲೂಕಿನಕಾಡಬೆಟ್ಟು ಶ್ರೀ ಶಾರದಾ ಭಜನಾ ಮಂದಿರದ 64 ನೇ ವರ್ಷದ ಭಜನಾ ಮಂಗಲೋತ್ಸವ ನಿಮಿತ್ತ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಮಂದಿರದ ಅಕ್ಕಪಕ್ಕ ಬೆಳೆದ ಹುಲ್ಲು ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ಮಾಡಲಾಯಿತು.
ಈ ಸಂದರ್ಭ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್, ಭಜನಾ ಸಮಿತಿಯ ಬಾಲಕೃಷ್ಣ, ರಾಮಕೃಷ್ಣ ಪ್ರಭು,ಭೇಟಿ ನೀಡಿದರು.

ಕಾಡಬೆಟ್ಟು ವಗ್ಗ ಶೌರ್ಯ ಘಟಕ ಸಂಯೋಜಕಿ ರೇಖಾ. ಪಿ. ಘಟಕ ಪ್ರತಿನಿಧಿ ಪ್ರವೀಣ್ , ಸದಸ್ಯರಾದ ಸಂಪತ್ ಶೆಟ್ಟಿ, ಮಹಾಬಲ ರೈ, ಅಶೋಕ ಬೊಲ್ಮರ್, ರೋಹಿತ್, ಜನಾರ್ದನ, ಅಶೋಕ್, ಪವಿತ್ರ, ನಾರಾಯಣ ಶೆಟ್ಟಿ, ವಿನೋದ, ಶಶಿಕಲಾ, ಆನಂದ, ಪ್ರಮೀಳ, ರಮೇಶ್,ಮೋಹನಂದ ಮೊದಲಾದವರು ಭಾಗವಹಿಸಿದ್ದರು.
ಶ್ರಮದಾನದ ನಂತರ ತಂಡದ ಮಾಸಿಕ ಸಭೆ ನಡೆಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.