ಫರಂಗಿಪೇಟೆ ಪ್ರಾ. ಕೃ. ಪ. ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ
ಬಂಟ್ವಾಳ: ಫರಂಗಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ12 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರುಷೋತ್ತಮ, ಜೀವನ್ ಪ್ರಕಾಶ್ ಡಿ’ಸೋಜ, ಪ್ರತಾಪ್ ಆಳ್ವ ಎಸ್, ಸುನೀಲ್ ಫೆರ್ನಾಂಡಿಸ್, ಸುಬ್ರಹ್ಮಣ್ಯ ರಾವ್, ಪಿ. ಹರೀಶ್ ( ಸಾಮಾನ್ಯ ಕ್ಷೇತ್ರ), ಸಂತೋಷ್ ಕುಮಾರ್ (ಹಿಂ. ವರ್ಗ ‘ಎ’ )ಪದ್ಮನಾಭ ಶೆಟ್ಟಿ ಪಿ (ಹಿಂ.ವರ್ಗ ‘ಬಿ’) ಶೈಲಜಾ ಪಿ.ಶೆಟ್ಟಿ, ವನಿತಾ (ಮಹಿಳಾ ಮೀಸಲು ), ಪ್ರವೀಣ್ (ಪ. ಜಾ.) ಹಾಗೂ ಜಯಾನಂದ (ಪ.ಪಂ.) ಅವರು ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಡಾ.ಜ್ಯೋತಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಂಘದ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಸಹಕರಿಸಿದರು.