Published On: Wed, Jan 22nd, 2025

ಕಿಚ್ಚ ಸುದೀಪ್, ರಝಾಕ್ ಪುತ್ತೂರು, ಜಯದೇವಿ ಶೆಟ್ಟಿ ಸೇರಿದಂತೆ ಅನೇಕರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ

2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಸುದೀಪ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ‘ಪೈಲ್ವಾನ್’ ಚಿತ್ರದಲ್ಲಿನ ನಟನೆಗೆ ಸುದೀಪ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿ ನೀಡಲಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಪೈಲ್ವಾನ್’ ಸಿನಿಮಾಗೆ ಎಸ್​. ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರು ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. 2019ರ ಸೆಪ್ಟೆಂಬರ್​ 12ರಂದು ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿತ್ತು. ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ಪಡೆದ ಸುದೀಪ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಪಿ. ಶೇಷಾದ್ರಿ ನಿರ್ದೇಶನ ಮಾಡಿದ ‘ಮೋಹನದಾಸ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್​ ಮಾಕ್ಟೇಲ್​’ 2ನೇ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಪಡೆದಿದೆ. ‘ಅರ್ಘ್ಯಂ’ 3ನೇ ಅತ್ಯುತ್ತಮ ಸಿನಿಮಾ ಆಗಿದೆ. ‘ಕನ್ನೇರಿ’ ಚಿತ್ರಕ್ಕೆ ‘ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ’ ಪ್ರಶಸ್ತಿ ನೀಡಲಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ನೀಡಲಾಗಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಲ್ಲಿನ ಅಭಿನಯಕ್ಕೆ ತಬಲಾ ನಾಣಿ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನುಷಾ ಕೃಷ್ಣ ಅವರು ‘ಬ್ರಾಹ್ಮಿ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ಅತ್ಯುತ್ತಮ ನಟ ಸುದೀಪ್ (ಪೈಲ್ವಾನ್)

ಅತ್ಯುತ್ತಮ ನಟಿ ಅನುಪಮಾ ಗೌಡ (ತ್ರಯಂಬಕಂ)

ಅತ್ಯುತ್ತಮ ಸಿನಿಮಾ (1st) ಮೋಹನದಾಸ (ಪಿ ಶೇಷಾದ್ರಿ)

ಅತ್ಯುತ್ತಮ ಸಿನಿಮಾ (2nd) ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಿನಿಮಾ (3rd) ಅರ್ಘ್ಯಂ (ವೈ ಶ್ರೀನಿವಾಸ್)

ಸಾಮಾಜಿಕ ಕಳಕಳಿ ಚಿತ್ರ ಕನ್ನೇರಿ (ಮಂಜುನಾಥ ಎಸ್)

ಮನರಂಜನಾ ಸಿನಿಮಾ ಇಂಡಿಯಾ vs ಇಂಗ್ಲೆಂಡ್ (ನಾಗತಿಹಳ್ಳಿ ಚಂದ್ರಶೇಖರ್)

ಮಕ್ಕಳ ಸಿನಿಮಾ ಎಲ್ಲಿ ಆಡೋದು ನಾವು ಎಲ್ಲಿ ಆಡೋದು (ಅರುಣ್ ಕುಮಾರ್)

ನಿರ್ದೇಶಕನ ಮೊದಲ ಚಿತ್ರ ಗೋಪಾಲ ಗಾಂಧಿ (ನಾಗೇಶ್)

ಪ್ರಾದೇಶಿಕ ಸಿನಿಮಾ ಟ್ರಿಬಲ್ ತಲಾಖ್ (ಬ್ಯಾರಿ ಭಾಷೆ-ನಿರ್ದೇಶಕ: ಯಾಕೂಬ್)

ಅತ್ಯುತ್ತಮ ಪೋಷಕ ನಟಿ ಅನೂಷಾ ಕೃಷ್ಣ (ಬ್ರಾಹ್ಮಿ)

ಅತ್ಯುತ್ತಮ ಪೋಷಕ ನಟ ತಬಲಾ ನಾಣಿ (ಕೆಮಿಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಕತೆ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ (ಜಯಂತ್ ಕಾಯ್ಕಿಣಿ)

ಅತ್ಯುತ್ತಮ ಚಿತ್ರಕತೆ ಲವ್ ಮಾಕ್ಟೆಲ್ (ಡಾರ್ಲಿಂಗ್ ಕೃಷ್ಣ)

ಅತ್ಯುತ್ತಮ ಸಂಭಾಷಣೆ ಅಮೃತಮತಿ (ಬರಗೂರು ರಾಮಚಂದ್ರಪ್ಪ)

ಅತ್ಯುತ್ತಮ ಛಾಯಾಗ್ರಹಣ ಮೋಹನದಾಸ (ಜಿಎಸ್ ಭಾಸ್ಕರ್)

ಅತ್ಯುತ್ತಮ ಸಂಕಲನ ಝಾನ್ಸಿ ಐಪಿಎಸ್ (ಬಸವರಾಜ್ ಅರಸ್)

ಅತ್ಯುತ್ತಮ ಬಾಲನಟ ಪ್ರೀತಂ (ಮಿಂಚು ಹುಳ)

ಅತ್ಯುತ್ತಮ ಬಾಲನಟಿ ಸುಗಂಧಿ (ಬೇಬಿ ವೈಷ್ಣವಿ ಅಡಿಗ)

ಅತ್ಯುತ್ತಮ ಕಲಾ ನಿರ್ದೇಶನ ಮೋಹನದಾಸ (ಹೊಸ್ಮನೆ ಮೂರ್ತಿ)

ಅತ್ಯುತ್ತಮ ಗೀತ ರಚನೆ ಪೆನ್ಸಿಲ್ ಬಾಕ್ಸ್ (ರಝಾಕ್ ಪುತ್ತೂರು)

ಅತ್ಯುತ್ತಮ ಗಾಯಕ ರಘು ದೀಕ್ಷಿತ್ (ಲವ್ ಮಾಕ್ಟೆಲ್)

ಅತ್ಯುತ್ತಮ ಗಾಯಕಿ ಜಯದೇವಿ ಶೆಟ್ಟಿ (ರಾಗ ಭೈರವಿ)

ತೀರ್ಪುಗಾರರ ಪ್ರಶಸ್ತಿ ಅಮೃತಮತಿ, ತಮಟೆ ನರಸಿಂಹಯ್ಯ, ಮಕ್ಕಡ್ ಮನಸು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter