ಬಂಟ್ವಾಳ: ಸಜೀಪಮಾಗಣೆ ಮಿತ್ತಮಜಲು ಕ್ಷೇತ್ರ ನೂತನ ಸುತ್ತು ಗೋಪುರ ನಿರ್ಮಾಣದ ಅಂಗವಾಗಿ ವಿಶೇಷ ಸಭೆ

ಬಂಟ್ವಾಳ: ಸಜಿಪ ಮಾಗಣೆ ಮಿತ್ತಮಜಲು ಕ್ಷೇತ್ರದಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನೂತನ 3 ಸುತ್ತು ಗೋಪುರಗಳ ಪುನರ್ ನಿರ್ಮಾಣಗೊಳಿಸುವ ಹಿನ್ನಲೆಯಲ್ಲಿ ಗ್ರಾಮಸ್ಥರ ಸಮಲೋಚನಾ ಸಭೆ ನಡೆಯಿತು.ಸಜಿಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರು ಸಾಮೂಹಿಕ ಪ್ರಾರ್ಥನೆಗೈದ ಬಳಿಕ ನಡೆದ ಸಮಾಲೋಚನಾ ಸಭೆಯಲ್ಲಿ
ಊರ ,ಪರಊರ ಭಕ್ತರ ಪೂರ್ಣ ಸಹಕಾರದಲ್ಲಿ ಬಿಸು ಜಾತ್ರೆಗೂ ಮುನ್ನುಗೋಪುರದ ಕಾಮಗಾರಿ ಪೂರ್ಣಗೊಳಿಸಿಲೋಕಾರ್ಪಣೆಗೆ ನಿರ್ಧರಿಸಲಾಯಿತು.ಈ ಸಂದರ್ಭ ವಿಜ್ಞಾಪನಾಪತ್ರವನ್ನು ಬಿಡುಗಡೆಗೊಳೊಸಲಾಯಿತು.
ಪಾಲೆಮಂಟಪ ಸಂಸಾರ ಗಡಿ ಪ್ರಧಾನರಾದ ಕಾಂತಡಿಗುತ್ತು ಗಣೇಶ ನಾಯಕ್ ಯಾನೆ ಉಗ್ಗಶೆಟ್ಟಿ, ಮಾಡದಾರು ಗೊತ್ತು ಶಶಿಧರರೈ ಯಾನೆ ನಾರಾಯಣ ಆಳ್ವ ಶಿವರಾಮ ಭಂಡಾರಿ, ಮುತ್ತಣ್ಣ ಶೆಟ್ಟಿ , ನಗ್ರಿಗುತ್ತು ವಿವೇಕ್ ಶೆಟ್ಟಿ, ದೇವಿ ಪ್ರಸಾದ್ ಪೂಂಜಾ, ಶ್ರೀಕಾಂತ್ ಶೆಟ್ಟಿ ,ಜಯರಾಮ ಶೆಟ್ಟಿ, ಜೀವನ್ ಆಳ್ವ, ಹರೀಶ್ ರೈ, ಗಣೇಶ ಶೆಟ್ಟಿ ,ಶ್ರೀನಾಥ್ ಶೆಟ್ಟಿ ಮೊದಲಾದ ಗುತ್ತು ಬಾಳಿಕೆ ಮನೆತನದವರು, ಚಾಕರಿ ವರ್ಗದವರು ಉಪಸ್ಥಿತರಿದ್ದರು.