ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಕಛೇರಿ ‘ವಿಕ್ರಮಾದಿತ್ಯ’ ದ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಕಛೇರಿ ‘ವಿಕ್ರಮಾದಿತ್ಯ’ ದ ಉದ್ಘಾಟನೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ನೆರವೇರಿಸಿದರು.ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ಮಾಡಿದ ಸ್ವಾಮೀಜಿ ಯಾವುದೇ ಸಂಸ್ಕಾರ ವಿಲ್ಲದ ವಿದ್ಯೆ ಪರಿಮಳವಿಲ್ಲದ ಪುಷ್ಪದಂತೆ, ನಾವು ಕಲಿಯುವಂತಹ ಮಾಧ್ಯಮದ ಜೊತೆಗೆ ನಮ್ಮ ಭಾರತೀಯ ಸಂಸ್ಕೃತಿ ಯನ್ನು ಮೈಗೂಡಿಸುವಂತಹ ವ್ಯವಸ್ಥೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ದಲ್ಲಿ ಕಾಣಬಹುದು” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಫದ ಅಧ್ಯಕ್ಷರು, ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮತಾನಾಡಿ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯು ಸಂಸ್ಕಾರಯುತ ಮೂಲ ಶಿಕ್ಷಣದ ಜೊತೆಗೆ ತರಗತಿಯಲ್ಲಿ ಆಂಗ್ಲ ಮಾಧ್ಯಮ ಬೋಧನಾ ಶಿಕ್ಷಣಾ ವ್ಯವಸ್ಥೆ ಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕಚೇರಿಯನ್ನು ತೆರೆಯಲಾಗಿದೆ” ಎಂದು ತಿಳಿಸಿದರು.

ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ತಿರುಮಲೇಶ್ವರ, ಪ್ರಶಾಂತ್ ಶ್ರೀಮಾನ್ ಉಪಸ್ಥಿತರಿದ್ದರು.ವಿದ್ಯಾಕೇಂದ್ರದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಎಲ್ಲಾ ವಿಭಾಗದ ಪ್ರಮುಖರು, ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕುಮಾರಿ ಪದ್ಮಶ್ರೀ ಪ್ರಾರ್ಥಿಸಿದರು. ವಿದ್ಯಾರ್ಥಿ ನಿಯರಾದ ಕು. ವೈಷ್ಣವಿ, ಎಸ್, ಕೆ ಸ್ವಾಗತಿಸಿದರು,ಕು. ಮನಾಲಿ ದೇವಸ್ಯ ವಂದಿಸಿದರು. ವಿದ್ಯಾಶ್ರೀ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.ಇದಕ್ಕು ಮೊದಲು ಶ್ರೀ ಸೂರ್ಯ ನಾರಾಯಣ ಭಟ್ ಕಶೆಕೋಡಿ ಇವರ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಿತು.