ಬಂಟ್ವಾಳ: ಹೊಸದಿಲ್ಲಿಯಲ್ಲಿ ಜ.26 ರಂದು ನಡೆಯುವ ರಿಪಬ್ಲಿಕ್ ಡೇ ಪರೇಡ್ – 2025ಕ್ಕೆ 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಂಗಳೂರು ಗ್ರೂಪ್ ನಿಂದ 3/18 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಆರ್ಮಿ ವಿಂಗ್ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ಜ್ಯೂನಿಯರ್ ಅಂಡರ್ ಆಫೀಸರ್ ಅಭಿನ್ ಹೆಚ್ ರೈ ಭಾಗವಹಿಸಲಿದ್ದಾರೆ ಎಂದು ಕಾಲೇಜು ತಿಳಿಸಿದೆ.
ಕರ್ನಾಟಕ ಮತ್ತು ಗೋವಾ ಡೈರಕ್ಟರೆಟ್‌ನ ಮಂಗಳೂರು ಗ್ರೂಪ್‌ನ ೧೮ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಮಂಗಳೂರು ಇದರಲ್ಲಿ ಒಟ್ಟು ೩೭ ಶಾಲಾ ಕಾಲೇಜುಗಳಲ್ಲಿ ಎನ್‌ಸಿಸಿ ಘಟಕ ಕಾರ‍್ಯನಿರ್ವಹಿಸುತ್ತಿದ್ದು ಅದರಲ್ಲಿ ೦೩ ಕಾಲೇಜುಗಳಿಂದ ಮೂರು ಎನ್‌ಸಿಸಿ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಈ ಪೈಕಿ ೩/೧೮ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಆರ್ಮಿ ವಿಂಗ್ ಬಂಟ್ವಾಳ ಎಸ್ .ವಿ.ಎಸ್ ಕಾಲೇಜಿನ ಜ್ಯೂನಿಯರ್ ಅಂಡರ್ ಆಫೀಸರ್. ಅಭಿನ್ ಹೆಚ್ ರೈ ಒಬ್ಬರಾಗಿರುತ್ತಾರೆ.

ಇವರಿಗೆ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಸಂಘದ ಉಪಾಧ್ಯಕ್ಷೆ ವತ್ಸಲ ಕಾಮತ್, ಸಂಘದ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್ ಹಾಗೂ ಶ್ರೀ ವೆಂಕಟರಮಣ ಸ್ವಾಮೀ ಸಮೂಹ ಸಂಸ್ಥೆ ವಿದ್ಯಾಗಿರಿ ಬಂಟ್ವಾಳ ಇದರ ಸಂಚಾಲಕಿ ಕೆ. ರೇಖಾ ಶೆಣೈ, ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್. ಪ್ರದೀಪ್ ಪೂಜಾರಿ, ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಶಿಕ್ಷಕ- ಶಿಕ್ಷಕೇತರ ವರ್ಗ ಅಭಿನಂದಿಸಿದೆ

By suddi9

Leave a Reply

Your email address will not be published. Required fields are marked *