ಪೊಳಲಿ ಪ್ರಾ. ಕೃ. ಪ.ಸ. ಸಂಘ ಕ್ಕೆ 11 ಮಂದಿ ನಿರ್ದೇಶಕರು ಅವಿರೋಧ ಆಯ್ಕೆ
ಬಂಟ್ವಾಳ:ತಾಲೂಕಿನ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಇದರ ಮುಂದಿನ ಐದುವರ್ಷಗಳ ನೂತನ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 11 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ ಅಭ್ಯರ್ಥಿಗಳಾದ ಸುಕೇಶ್ ಚೌಟ,ವೆಂಕಟೇಶ್ ನಾವಡ,ಅಬುಬಕ್ಕರ್ ಡಿ.ಎ.,ಗೋಪಾಲ ಅಂಚನ್,ನಿರಂಜನಿ ಸಿ.ಶೆಟ್ಟಿ,ಜಯಂತಿ,ಯಶವಂತ ಪೂಜಾರಿ,ಕರುಣಾಕರ ಆಳ್ವ, ————–ಕರಿಯದ ಹಾಗೂ ಕಾಂಗ್ರೆಸ್ ಬೆಂಬಲಿತ ಗೋಡ್ ಪಿ.ಫೆರ್ನಾಂಡೀಸ್,ಲಕ್ಷ್ಮೀಶ ಶೆಟ್ಟಿ ಅಭ್ಯರ್ಥಿಗಳು ಅವಿರೋಧವಾಗಆಯ್ಕೆಯಾಗಿದ್ದಾರೆ.
ಪ.ಪಂ.ದ ಒಂದು ಸ್ಥಾನಕ್ಕೆ ನಾಮಪತ್ರ ಸ್ವೀಕೃತವಾಗದ ಹಿನ್ನಲೆಯಲ್ಲಿ ಈ ಸ್ಥಾನ ಖಾಲಿ ಉಳಿದಿದೆ.ಸೋಮವಾರ ಸಂಘದ ಸಭಾಂಗಣದಲ್ಲಿ ಸಹಕಾರ ಸಂಘಗಳಮಂಗಳೂರು ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜೆ.ಗೋಪಾಲ್ ಅವರು ಚುನಾವಣಾಧಿಕಾರಿಯಾಗಿದ್ದು ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಘದ ಕಾರ್ಯದರ್ಶಿ ಹಾಗೂ ಸುಬ್ಬಂದಿಗಳು ಸಹಕರಿಸಿದರು. ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ ನೂತನ ನಿರ್ದೇಶಕರಿಗೆ ಶಾಸಕ ರಾಜೇಶ್ ನಾಯ್ಕ್ ಅಬಜಿನಂದಿಸಿದ್ದಾರೆ.