Published On: Mon, Jan 13th, 2025

ಹಿಂದೂ ಧರ್ಮವು ಆಧ್ಯಾತ್ಮಿಕ ಶಕ್ತಿಯ ನೆಲೆ: ಕುಂಟಾರು ರವೀಶ್ ತಂತ್ರಿ

ಬಂಟ್ವಾಳ :ಭಾರತ ಧರ್ಮದಿಂದ ಗುರುತಿಸಲ್ಪಟ್ಟ ರಾಷ್ಟ್ರವಾಗಿದ್ದು, ಹಿಂದೂ ಧರ್ಮವು ಆಧ್ಯಾತ್ಮಿಕ ಶಕ್ತಿಯ ನೆಲೆ, ಧರ್ಮದ ಆಚಾರ, ವಿಚಾರಗಳಿಗೆ ನಮ್ಮಲ್ಲಿ ಉತ್ತರವಿದೆ, ಜಗತ್ತಿಗೆ ಗುರುವಿನ ಸ್ಥಾನದಲ್ಲಿದ್ದು ಅಲಂಕರಿಸುವ ಶಕ್ತಿ ಭಾರತದ ಪುಣ್ಯ ಮಣ್ಣಿಗಿದೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಹೇಳಿದರು.

ಬಂಟ್ವಾಳ ತಾ.ನ ಪುದುಗ್ರಾಮದ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ   ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥ ನವಗ್ರಹ ಶತ ರುದ್ರಯಾಗದ ಪ್ರಯುಕ್ತ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀ ರಾಮನ ಕಪಿ ಸೇನೆಯಂತೆ ಇಲ್ಲು ಕೂಡ ಯುವ ಭಕ್ತ ಸಮೂಹದ ಶಕ್ತಿಇದೆ, ಸಮಾಜಕ್ಕೆ ಒಳಿತು ಮಾಡುವ, ಹಿಂದೂ ಧರ್ಮದ ಸಂಸ್ಕಾರವನ್ನು ಉನ್ನತಿಯತ್ತ ಕೊಂಡೊಯ್ಯುವ ಕಾರ್ಯ  ನಿರಂತರ ನಡೆಯಬೇಕಾಗಿದ್ದು,ಮೃತ್ಯುವನ್ನು ಜಯಿಸುವ ರುದ್ರಯಾಗ ಎಲ್ಲರಿಗೂ ಕಲ್ಯಾಣವನ್ನುಟು ಮಾಡಲಿ ಎಂದು ಹಾರೈಸಿದರು.
ರೋಟರಿ ಜಿಲ್ಲೆ ಮಾಜಿ ಗವರ್ನರ್ ಪ್ರಕಾಶ್ ಕಾರಂತ ಅವರು ಮಾತನಾಡಿ,ಯಾಗಗಳಿಂದ ದೇಹ,ಮನಸ್ಸು, ಪರಿಸರ ಶುದ್ದಿಯಾಗಿ ಭಕ್ತರ ಸಕಾರತ್ಮಕ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಸುಜೀರು ಗುತ್ತಿನ ಯಜಮಾನ ರಾಮಕೃಷ್ಣ ಚೌಟ ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿಯ ಭಕ್ತಸಮೂಹದ ಪ್ರಾಮಾಣಿಕ ಪರಿಶ್ರಮ ಹಾಗೂ ಒಗ್ಗಟ್ಟಿನಿಂದ ದೈವ ದೇವರು ಪ್ರಸನ್ನರಾಗಿ ಮುಂದಿನ ದಿನಗಲ್ಲಿ ಹೆಚ್ಚಿನ ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
  ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ದ. ಕ ಇದರ ಅಧ್ಯಕ್ಷ ಮಯೂರ್ ಉಳ್ಳಾಲ್ ಶುಭ ಹಾರೈಸಿದರು,ಮಂದಿರ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಕಂಬಳಿ ಪ್ರಸ್ತಾವನೆಗೈದರು.
ವೇದಿಕೆಯಲ್ಲಿ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಮಹೋತ್ಸವ ಸಮಿತಿ ಅಧ್ಯಕ್ಷ ಐತ್ತಪ್ಪ ಆಳ್ವ ಸುಜೀರುಗುತ್ತು , ಶ್ರೀ ಅರಸು ವೈದ್ಯನಾಥ ದೈವದ ಪಾತ್ರಿ ಮೋನಪ್ಪ ಯಾನೆ ಮುಂಡ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಕಂಬಳಿ ಸುಜೀರುಗುತ್ತು ಇವರನ್ನು ಅಭಿನಂದಿಸಲಾಯಿತು.ಪ್ರ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು ಸ್ವಾಗತಿಸಿ,ಕೋಶಾಧಿಕಾರಿ ಪ್ರಮೋದ್ ಕುಮಾರ್ ಸುಜೀರು ವಂದಿಸಿದರು, ಉಮೇಶ್ ಕೋಟ್ಯಾನ್ ವಾಮದಪದವು ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter