ಸುಜೀರು ಶ್ರೀಅರಸು ವೈದ್ಯನಾಥ,ಧೂಮಾವತಿ ಬಂಟ ಪರಿವಾರ ದೈವಗಳ ಕ್ಷೇತ್ರದ ಸಾನಿಧ್ಯದಲ್ಲಿ “ನವಗ್ರಹ ಸಹಿತ ಶತ ರುದ್ರಯಾಗ”
ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದ 75ನೇ ವರ್ಷದ ಏಕಾಹ ಭಜನಾ ಮಹೋತ್ಸವ ಹಾಗೂ ಲೋಕ ಕಲ್ಯಾಣಾರ್ಥವಾಗಿ “ನವಗ್ರಹ ಸಹಿತ ಶತ ರುದ್ರಯಾಗ”ವು ಭಾನುವಾರ ಸುಜೀರು ಶ್ರೀಅರಸು ವೈದ್ಯನಾಥ,ಧೂಮಾವತಿ ಬಂಟ ಪರಿವಾರ ದೈವಗಳ ಕ್ಷೇತ್ರದ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರದ ಪುರೋಹಿತರಾದ ಏರ್ಯ ರಘರಾಮ ಮಯ್ಯ ಅವರ ಪೌರೋಹಿತ್ಯದಲ್ಲಿ ಅವೆ ಮಣ್ಣಿನಲ್ಲೇ ಸಿದ್ದಪಡಿಸಲಾದ ವೃಷಭಾಯ ಮಂಟಪದಯಾಗಕುಂಡದಲ್ಲಿ ಈ ಶತರುದ್ರ ಯಾಗವು ಎರಡೂವರೆ ತಾಸುಗಳ ಕಾಲ ಯಾಗ ನಡೆಯಿತು.ಮಧ್ಯಾಹ್ನ ಪೂರ್ಣಾಹುತಿಯಾಗಿ ಶ್ರೀರಾಮ ದೇವರಿಗೆ ಮಹಾಪೂಜೆ,ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆಯು ನೆರವೇರಿತು.
ಎಂಟು ವರ್ಷಗಳ ಹಿಂದೆ
ಕ್ಷೇತ್ರದ ದೈವಗಳು ನೀಡಿರುವ ಅಭಯದಂತೆ ,ಇಲ್ಲಿಗೆ ಸಂಬಂಧಪಟ್ಟ ಸುತ್ತಮುತ್ತಲಿನ 6 ಗ್ರಾಮಗಳನ್ನು ಜೋಡಿಸಿಕೊಂಡು ಜನರ ಸಕಲ ಇಷ್ಟಾರ್ಥ ಸಿದ್ದಿಗಾಗಿ ಈ ಯಾಗವನ್ನು ನೆರವೇರಿತು.
ಈ ಸಂದರ್ಭ ಸಮಿತಿ ಪದಾಧಿಕಾರಿಗಳಾದ ಐತಪ್ಪ ಆಳ್ವ ಸುಜೀರುಗುತ್ತು,ಪ್ರಕಾಶ್ಚಂದ್ರ ರೈ ದೇವಸ್ಯ,ರವೀಂದ್ರ ಕಂಬಳಿ ಸುಜೀರುಗುತ್ತು,
ಪ್ರವೀಣ್ ಕುಮಾರ್ ಶೆಟ್ಟಿ ಸುಜೀರು, ಚಂದ್ರಶೇಖರ ಗಾಂಭೀರ ಸುಜೀರುಗುತ್ತು,ಬಾಲಕೃಷ್ಣ ಗಾಂಭೀರ ಸುಜೀರುಗುತ್ತು,ಲತೇಶ್ ಸುಜೀರ್, ಮಹೇಶ್ ಕೊಡಂಗೆ,ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.ಸಾವಿರಾರು ಮಂದಿ ಭಗವದ್ಬಕ್ತರು ಯಾಗದಲ್ಲಿ ಪಾಲ್ಗೊಂಡು ಪುನೀತರಾದರು.ಕ್ಷೇತ್ರದ ಇಡೀಪರಿಸರ ಕೇಸರಿಮಯವಾಗಿ ಕಂಗಳಿಸಿತು.ಸೋಮವಾರ ಬೆಳಗಿನ ಜಾವದಿಂದ ಮಂಗಳವಾರ ಬೆಳಗಿನವರೆಗೆ 75 ವರ್ಷದ ಏಕಹಾ ಭಜನಾ ಮಹೋತ್ಸವ ನಡೆಯಲಿದೆ.