ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ: ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಗಾಡಿಪಲ್ಕೆ ಯಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಮಯ್ಯ ಕುಲಾಲ್ ಬೊಟ್ಟುಮನೆ ವಹಿಸಿದ್ದರು.ಕುಲಾಲ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ದ. ಕ. ಜಿ.ಪಂ. ನ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೆಸ್ಕಾಂ ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಮಂಜಪ್ಪ ಮೂಲ್ಯ, ಬಂಟ್ವಾಳ ತಾಲೂಕು ಸಂಘದ ಅಧ್ಯಕ್ಷರಾದ ಬಿ. ಕೃಷ್ಣಪ್ಪ ಕಲ್ಲಡ್ಕ, ನಿವೃತ್ತ ಬ್ಯಾಂಕ್ ಉದ್ಯೋಗಿ ಸೋಮಯ್ಯ ಕುಲಾಲ್ ಹನೈನಡೆ, ಕಿಶೋರ್ ಪಳ್ಳಿಪಾಡಿ, ಶಂಕರ್ ಕುಲಾಲ್ ಸಾಣೂರು ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು ಹಾಗೂ ಬಹುಮುಖ ಪ್ರತಿಭೆ ಕು. ಜ್ಞಾನ ಶ್ರೀ ಡಿ.ಅರಳ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೂತನ ಅಧ್ಯಕ್ಷರಾಗಿ ಮನೋಜ್ :
ಸಂಘದ ನೂತನ ಅಧ್ಯಕ್ಷರಾಗಿ ಮನೋಜ್ ಕುಲಾಲ್ ಬಸವನಬೈಲು ಅವರು ಆಯ್ಕೆಯಾಗಿದ್ದಾರೆ.ಉಳಿದಂತೆ ಪದಾಧಿಕಾರಿಗಳಾಗಿ ಚೈತ್ರ ನಾಗೇಶ್ ಸೂರ್ಯ(ಉಪಾಧ್ಯಕ್ಷ) ,ಅರುಣ್ ಕುಲಾಲ್ ಕುದ್ಕೋಳಿಬೈಲು (ಕಾರ್ಯದರ್ಶಿ), ಸುಮತಾ ಪುರುಷೋತ್ತಮ್ ( ಕೋಶಾಧಿಕಾರಿ),ಪುರಂದರ ಕುಲಾಲ್ ಕುದ್ಕೊಳಿ (ಪ್ರಧಾನ ಸಂಘಟಕ) ಇವರು ಮುಂದಿನ ಅವಧಿಗೆ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿ ವಸಂತ ಕುಲಾಲ್ ಓಣಿದಡಿ ಇವರು ವರದಿ ವಾಚಿಸಿದರು. ಕು. ಚೈತ್ರ ಸೂರ್ಯ ಅವರು ಸ್ವಾಗತಿಸಿದರು. ಕು. ಅಂಕಿತಾ ವಂದಿಸಿದರು.