ಬಂಟ್ವಾಳ: ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ವತಿಯಿಂದ ” ಕಲಾ ಪರ್ವ” ಕಾರ್ಯಕ್ರಮ
ಬಂಟ್ವಾಳ: ನಾಟ್ಯ ವಿದುಷಿ ವಿದ್ಯಾ ಮನೋಜ್ ಇವರ ನಿರ್ದೇಶನದಲ್ಲಿ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಭರತನಾಟ್ಯ ಸಂಸ್ಥೆಯ ಕಲ್ಲಡ್ಕ ಮತ್ತು ಬಿ.ಸಿ. ರೋಡ್ ಶಾಖೆಯ ಆಶ್ರಯದಲ್ಲಿ ” ಕಲಾ ಪರ್ವ” ಬಿ.ಸಿ. ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ನಡೆಯಿತು. ವಿಶ್ವ ಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್ (ರಿ) ಪುತ್ತೂರು ಇದರ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಭರತನಾಟ್ಯ ಕಲಾವಿದೆ, ಮಂಗಳೂರು ನೃತ್ಯಾಂಗನ್ ಸಂಸ್ಥೆಯ ಸಂಸ್ಥಾಪನಾ ನಿರ್ದೇಶಕರಾದ ರಾಧಿಕಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಬಳಿಕ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಜರುಗಿತು. ಹಿಮ್ಮೇಳದ ನಟುವಾಂಗದಲ್ಲಿ ವಿದುಷಿ ವಿದ್ಯಾ ಮನೋಜ್ ಮತ್ತು ವಿದುಷಿ ಡಾ. ಮಹಿಮಾ ಎಂ ಪಣಿಕ್ಕರ್, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ ಮತ್ತು ವಿದುಷಿ ಶ್ರೀದೇವಿ ಕಲ್ಲಡ್ಕ, ಮೃದಂಗದಲ್ಲಿ ವಿದ್ವಾನ್ ಗೀತೇಶ್ ಎ.ಜಿ. ನೀಲೇಶ್ವರ, ಕೊಳಲು ವಾದನದಲ್ಲಿ ವಿದ್ವಾನ್ ರಾಹುಲ್ ಕಣ್ಣೂರು ಸಹಕರಿಸಿದರು.