ಬಂಟ್ವಾಳ: ರಾಜ್ಯ ಧಾರ್ಮಿಕ ಪರಿಷತ್ತಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಎ.ರವಿಶಂಕರ ಶೆಟ್ಟಿ ನೇಮಕ
ಬಂಟ್ವಾಳ: ರಾಜ್ಯ ಧಾರ್ಮಿಕ ಪರಿಷತ್ತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಧಾರ್ಮಿಕ ನೇತಾರ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಎ.ರವಿಶಂಕರ ಶೆಟ್ಟಿ ಬಡಾಜೆ ಅವರನ್ನು ನಾಮನಿರ್ದೇಶನಗೊಳಿಸಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಬೆಂಗಳೂರಿನ ಗಂಗಾನಗರದಲ್ಲಿ ವಾಸ್ತವ್ಯವಿರುವ ಅವರು ಬಂಟ್ವಾಳತಾಲೂಕಿನ ಸುಮಾರು 65 ದೇವಸ್ಥಾನ ಹಾಗೂ ದೈವಸ್ಥಾನಗಳನ್ನು ಸ್ವಂತ ಖರ್ಚಿನಲ್ಲೇ ಜೀಣೋದ್ದಾರಗೊಳಿಸಿದ ಹೆಗ್ಗಳಿಕೆ ಇದೆ.
ರಾಜಕೀಯ ಮಾತ್ರವಲ್ಲ ಧಾರ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಸಾಮಾಜಿಕ ಚಟುವಟಿಕೆಯಲ್ಲು ತೊಡಗಿಸಿರುವ ಅವರು ಬಂಟ್ವಾಳ ತಾ.ಅಮ್ಟಾಡಿಗ್ರಾಮದ ಮಂಗ್ಲಿಮಾರು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಪರಿವಾರ ದೈವಗಳ ದೈವಸ್ಥಾನ ಹಾಗೂ ಕಲಾಯಿ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರು ಆಗಿದ್ದಾರೆ. ಮಂಗ್ಲಿಮಾರ್ ಕ್ಷೇತ್ರದ ವತಿಯಿಂದ ನಿರಂತರವಾಗಿ ವಿವಿಧ ಕ್ಷೇತ್ರದ ಸಾಧಕರನ್ನು,ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ ಅಭಿನಂದಿಸುವ ಕಾರ್ಯವನ್ನು ರವಿಶಂಕರ ಶೆಟ್ಟಿ ಅವರು ನಡೆಸಿಕೊಂಡು ಬರುತ್ತಿದ್ದಾರೆ.