ಬಂಟ್ವಾಳ: ನರಿಕೊಂಬು ಗ್ರಾಮದ ಶ್ರೀ ವಿಜಯಲಕ್ಷ್ಮಿ ಯುವಕ ಸಂಘದ 55ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ವಿಜಯಲಕ್ಷ್ಮಿ ಯುವಕ ಸಂಘ( ರಿ.) ಇದರ 55ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ನರಿಕೊಂಬು ನಾಲ್ಕೈತ್ತಾಯ, ಪಂಜುರ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಬಂಗೇರ ನಿರ್ಮಲ್ ಮಕ್ಕಳು ಇಡುವ ಹೆಜ್ಜೆಯ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ. ಯುವ ಜನಾಂಗಕ್ಕೆ ಶಿಕ್ಷಣದ ನೀಡುವುದರ ಜೊತೆಗೆ ಉದ್ಯೋಗ ಕೊಡುವ ಕಡೆ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಮಕ್ಕಳ ಪೋಷಕರು ತಮ್ಮ ಮಕ್ಕಳ ಚಲನ ವಲನಗಳ ಬಗ್ಗೆ ನಿಗಾ ಇಡಬೇಕು, ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.ಈ ಸಂದರ್ಭದಲ್ಲಿ ಭೌತಶಾಸ್ತ್ರ ದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಸದಾನಂದ ಕುಮಾರ್ ಏನ್, ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನದಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ದೀಕ್ಷಿತ ಪ್ರಶಾಂತ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಓಂ ಶ್ರೀ ಗೆಳೆಯರ ಬಳಗ ನಾಯಿಲ ಅಧ್ಯಕ್ಷರಾದ ಕಿರಣ್ ಆಟ್ಲೂರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಶಂಬೂರ್ ಮೂರ್ತದಾರರ ಸಹಕಾರಿ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಸಾಲಿಯಾನ್, ವಿಜಯಲಕ್ಷ್ಮಿ ಯುವಕ ಸಂಘದ ಮಾಜಿ ಅಧ್ಯಕ್ಷರಾದ ಪ್ರಶಾಂತ ಕಾರಂತ್, ಎರಮಳೆ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೇಶವ ಶಾಂತಿ, ವಿಜಯಲಕ್ಷ್ಮಿ ಯುವಕ ಸಂಘದ ಅಧ್ಯಕ್ಷರಾದ ಹರೀಶ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗಾಣಿಗ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕ್ರೀಡಾ ಕಾರ್ಯದರ್ಶಿ ಗಿರೀಶ್ ಪೂಜಾರಿ ಬಸ್ರ ಪ್ರಸ್ತಾವನೆಗೈದು ಸ್ವಾಗತಿಸಿದರು, ಕೋಶಾಧಿಕಾರಿ ಕೃಷ್ಣಪ್ಪ ಗಾಣಿಗ ಅಂತರ ವಾರ್ಷಿಕ ವರದಿ ಮೂಡಿಸಿದರು , ರಾಜೇಶ್ ರಾಯಸ ಹಾಗೂ ಪ್ರೇಮನಾಥ್ ಶೆಟ್ಟಿ ಅಂತರ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿ, ಜೊತೆ ಕಾರ್ಯದರ್ಶಿ ಸುರೇಶ್ ಕುಲಾಲ್ ವಂದಿಸಿದರು. ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ನಿಮಿತ್ತ ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ, ನಿಶಾನಿ ಡಾನ್ಸ್ ಗ್ರೂಪ್ ನರಿಕೊಂಬು ಇವರಿಂದ ” ಡ್ಯಾನ್ಸ್ ಟು ಡ್ಯಾನ್ಸ್ “, ಪ್ರೇರಣ ಸಂಘ ಮೊಗರ್ನಾಡ್ ಇವರಿಂದ ತುಳುನಾಡ ಆಚಾರ ವಿಚಾರ ರೂಪಕ, ಹಾಗೂ ಪಿಂಗಾರ ಕಲಾವಿದರು ಬೆದ್ರ ಇವರಿಂದ ತುಳು ನಾಟಕ ಜರಗಿತು.