ಬಂಟ್ವಾಳ: ಬದನಾಜೆ ಶಂಕರ ಭಟ್ ಮತ್ತು ಈಶ್ವರ ಮಲ್ಪೆ ಅವರಿಗೆ “ಸರಿದಂತರ” ಪ್ರಶಸ್ತಿ ಪ್ರದಾನ
ಬಂಟ್ವಾಳ: ಪ್ರಕಾಶನದ ವತಿಯಿಂದ ಭಾನುವಾರ ಕೈಕಂಬ ಶಮ್ಯಾಪ್ರಾಸದಲ್ಲಿ ನಡೆದ “ಸರಿದಂತರ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಪಂಡಿತ, ಸಂಶೋಧಕ ಬದನಾಜೆ ಶಂಕರ ಭಟ್ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಸರಿದಂತರ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಂಗಳೂರು ರಾಮಕೃಷ್ಣ ಮಿಷನ್-ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಅವರು ಮಾನವ ಸಂಬಂಧಗಳ ಕುರಿತು ಮಾತನಾಡಿದರು. ವೈದ್ಯ ಡಾ. ಎಂ.ಎಸ್.ಭಟ್ ಉಪಸ್ಥಿತರಿದ್ದರು. ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ ಪ್ರಸ್ತಾವನೆಗೈದರು. ಭಾರತಿ ರಾಮಕುಂಜ ಹಾಗೂ ಮೇಧಾ ರಾಮಕುಂಜ ಅವರು ಸಮ್ಮಾನ ಪತ್ರ ವಾಚಿಸಿದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.