Published On: Thu, Dec 26th, 2024

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವ

ಪುತ್ತೂರು: ಯುವ ಜನಾಂಗ ಸಂಸ್ಕೃತಿಯಿಂದ ವಿಮುಖವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಿರಿಯರ ಮೇಲಿದೆ. ಹಿರಿಯರ ಪ್ರಯತ್ನದಿಂದ ಮರೆಯಾಗುತ್ತಿರುವ ಸಂಸ್ಕಾರಗಳನ್ನು ಮರುಕಳಿಸುವಂತೆ ಮಾಡಲು ಸಾಧ್ಯ‌ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು.

ಪುತ್ತೂರಿನ ಕಲ್ಲೇಗದ ಭಾರತ ಮಾತಾ ಸಮುದಾಯ ಭವನದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ ಎ.ವಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ. ವಸಂತಕುಮಾರ ತಾಳ್ತಜೆ ವಿಶೇಷ ಉಪನ್ಯಾಸ ನೀಡಿದರು.

ಪುತ್ತೂರು ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ ಹಿರಿಯರಿಗೆ ಆರೋಗ್ಯ ಸಲಹೆಗಳನ್ನು ನೀಡಿದರು.ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ. ಕೃಷ್ಣಕುಮಾರ ಪೂಂಜ,ಕರ್ನಾಟಕ ಸರಕಾರದಿಂದ ಕನಕ ಪ್ರಶಸ್ತಿ ಪುರಸ್ಕೃತರಾದ ತಾಳ್ತಜೆ ವಸಂತಕುಮಾರ ಇವರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೋ. ಎ. ವಿ ನಾರಾಯಣ, ಸಾಮಾಜಿಕ ಕಾರ್ಯಕರ್ತರಾದ ಸಿ.ಎಚ್ ಬಾಲಕೃಷ್ಣ ಶೆಟ್ಟಿ ಮಂಗಳೂರು ಮತ್ತು ಪ್ರೇಮಲತಾ ಟಿ.ರಾವ್ ಪುತ್ತೂರು, ಮಹಾಬಲ ರೈ ಒಳತಡ್ಕ ಇವರನ್ನು ಗೌರವಿಸಲಾಯಿತು.ಕೇಂದ್ರ ಸಮಿತಿ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ವಿವರವನ್ನು ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸಭೆಗೆ‌ ಮಂಡಿಸಿದರು.

ಪ್ರತಿಷ್ಠಾನದ ಬಂಟ್ವಾಳ ಘಟಕದಿಂದ ಧೀರಜ್ ನಾಯ್ಕ್ ಪುಚ್ಛಕೆರೆ ಮಂಚಿ, ಗಣಪ ಪೂಜಾರಿ ಅಬ್ಬೆಟ್ಟು,ವಾಮನ ಪೂಜಾರಿ ಫರಂಗಿಪೇಟೆ ಮತ್ತು ಪುತ್ತೂರು ಘಟಕದಿಂದ ಹೊನ್ನಮ್ಮ ಬಲ್ನಾಡು ಇವರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.

ಸಂಚಾಲಕ ಭಾಸ್ಕರ ಬಾರ್ಯ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಮಂಗಳೂರು ಘಟಕದ ಅಧ್ಯಕ್ಷ ಭರತ್.ಕೆ , ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ ಉಜಿರೆ, ಬಂಟ್ವಾಳ ಘಟಕದ ಅಧ್ಯಕ್ಷ ಸುಬ್ರಾಯ ಮಡಿವಾಳ ಬಿ.ಸಿ ರೋಡು, ಪುತ್ತೂರು ಘಟಕದ ಜಿಲ್ಲಾ ಪ್ರತಿನಿಧಿ ಸಂಜೀವ ನಾಯಕ್ ಕಲ್ಲೇಗ, ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಟ್ರಸ್ಟಿಗಳಾದ ಲೋಕೇಶ್ ಹೆಗ್ಡೆ ಪುತ್ತೂರು, ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಅನಾರು ಕೃಷ್ಣಶರ್ಮ, ಪದಾಧಿಕಾರಿಗಳಾದ ಭವಾನಿ ಶಂಕರ ಶೆಟ್ಟಿ ಪುತ್ತೂರು, ಕೆ.ರಾಮಕೃಷ್ಣ ನಾಯಕ್ ಬಂಟ್ವಾಳ, ಜಯಾನಂದ ಪೆರಾಜೆ, ವಸಂತ ಸುವರ್ಣ ಬೆಳ್ತಂಗಡಿ, ಕೆ.ವಾರಿಜ ಬೆಳ್ತಂಗಡಿ, ಚಂಚಲಾಕ್ಷಿ ಪುತ್ತೂರು, ಪ್ರೊ ವಿ. ಜಿ ಭಟ್ ಪುತ್ತೂರು,‌ಪದ್ಮಯ್ಯ, ರಾಜಮಣಿ ರಾಮಕುಂಜ,ಗಣೇಶ್ ಭಟ್ ಬೆಳ್ತಂಗಡಿ,ಹಾಜೈ…ರಿದ್ದರು ಗುಂಡ್ಯಡ್ಕ ಈಶ್ವರ ಭಟ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರಸ್ತಾವಿಸಿ, ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಡಾ.ಬಿ. ಎನ್ ಮಹಾಲಿಂಗ ಭಟ್ ಅಭಿನಂದನಾ ಭಾಷಣಗೈದರು. ಸಹ ಸಂಚಾಲಕ ಪ್ರೊ. ವೇದವ್ಯಾಸ ರಾಮಕುಂಜ ಪ್ರಾರ್ಥಿಸಿದರು.ಟ್ರಸ್ಟಿ ದುಗ್ಗಪ್ಪ.ಎನ್ ಪುತ್ತೂರು ವಂದಿಸಿದರು. ಟ್ರಸ್ಟಿ ಜಯರಾಮ ಪೂಜಾರಿ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಾಸ್ಕರ ಬಾರ್ಯ ಸಂಯೋಜನೆಯಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸದಸ್ಯರಿಂದ ಪಾರ್ಥಸಾರಥ್ಯ ತಾಳ ಮದ್ದಳೆ ಜರಗಿತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter