Published On: Tue, Feb 4th, 2025

ಪುತ್ತೂರು: ಪುತ್ತೂರು ಮಾದರಿಯ ‘ಸ್ವಚ್ಛ ಸಂಸ್ಕೃತಿ’ ಜಿಲ್ಲಾದ್ಯಂತ ಅಡಿಗಲ್ಲು

ಪುತ್ತೂರು ಸ್ವಚ್ಛತಾ ಕಾರ್ಯಕ್ರಮ ಈಗ ಜಿಲ್ಲೆಗೆ ಮಾದರಿಯಾಗಿದೆ. ಹೌದು ಅಧಿಕಾರಿಗಳು ಎಂಬ ಅಹಂಕಾರ ಇಲ್ಲದೆ, ನಮ್ಮ ತಾಲೂಕು ಸ್ವಚ್ಛವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಅಧಿಕಾರಿಗಳು ಬೆಳಿಗ್ಗೆ ಎದ್ದು ಕೈಗೆ ಗ್ಲೌಸ್​ ಹಾಕಿಕೊಂಡು ಪ್ರತಿ ಬೀದಿ ಬೀದಿಗೆ ಹೋಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಿದ್ದರು. ಇಲ್ಲಿಯ ಅಧಿಕಾರಿಗಳ ಬಾಯಿಯಲ್ಲಿ ಇದ್ದ ಮಂತ್ರ ಒಂದೇ ನಮ್ಮ ಸಂಸ್ಕೃತಿ-ಸಚ್ಛ ಸಂಸ್ಕೃತಿ. ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರ ಪರಿಕಲ್ಪನೆಯಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ, ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ನಡೆದ ಈ ಸ್ವಚ್ಛತಾ ಅಭಿಯಾನ ಇದೀಗ ರಾಜ್ಯಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ತಾಲೂಕುಗಳ ಆಡಳಿತಕ್ಕೂ ಇದನ್ನು ಪಾಲಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter