ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಾಗನಕಟ್ಟೆಗೆ ಹಾನಿ ಮಾಡಿದ ಮುಸ್ಲಿಂ ಯುವಕ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಾಗನಕಟ್ಟೆಗೆ ಮುಸ್ಲಿಂ ಯುವಕ ಹಾನಿ ಮಾಡಿದ್ದಾನೆ. ನೆಲ್ಲಿಕಟ್ಟೆಯ ನಾಗನಬನಕ್ಕೆ ಹಾನಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಮಹಮ್ಮದ್ ಸಲಾಂ ಎನ್ನುವ ಯುವಕನಿಂದ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.

ಏಕಾಏಕಿ ನಾಗನಕಟ್ಟೆಗೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ ಎಂದು ಹೇಳಲಾಗಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಇದೀಗ ಈ ಕೃತ್ಯವನ್ನು ಎಸಗಿರುವ ಮಹಮ್ಮದ್ ಸಲಾಂನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇತ ಗಾಂಜಾ ವ್ಯಸನಿ ಎಂದು ಹೇಳಲಾಗಿದೆ. ಇಂಥಹ ಹಲವು ಪ್ರಕರಣಗಳು ಇತನ ಮೇಲಿದೆ ಎಂದು ಹೇಳಲಾಗಿದೆ. ಆರೋಪಿ ಮಹಮ್ಮದ್ ಸಲಾಂ ಗಾಂಜಾ ಸೇವಿಸಿ ಸಮಾಜಕ್ಕೆ ಕಂಟಕವಾಗಿದ್ದಾನೆ.