ಉಡುಪಿ: ಜಮ್ಮುವಿನ ಕಾಶ್ಮೀರದಲ್ಲಿ ಸೇನೆ ವಾಹನ ಅಪಘಾತ; ಉಡುಪಿಯ ಯೋಧ ಅನೂಪ್ ಹುತಾತ್ಮ
ಉಡುಪಿ: ಜಮ್ಮುವಿನ ಕಾಶ್ಮೀರದ ಪುಂಚ್ ನಲ್ಲಿ ಸೇನೆ ವಾಹನ ಅಪಘಾತಗೊಂಡು ಕನ್ನಡಿಗ ಯೋಧ ಹುತಾತ್ಮಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ರಾಜ್ಯಕ್ಕೆ ಹುತಾತ್ಮ ಯೋಧ ಅನೂಪ್ ಪಾರ್ಥಿವ ಆಗಮನವಾಗಿದೆ. ಹುತಾತ್ಮ ಯೋಧ ಅನೂಪ್ ಹುಟ್ಟೂರಿನಲ್ಲಿ ಅಂತಿಮ ಸಂಸ್ಕಾರ ಮಾಡಲಾಗುತ್ತದೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿಯ ನಿವಾಸಿಯಾಗಿರುವ ಅನೂಪ್, ಇಂದು ರಾತ್ರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಸೇನಾ ವಿಮಾನದಲ್ಲಿ ಪಾರ್ಥಿವ ಆಗಮಿಸಲಿದೆ.
ಮಂಗಳೂರು ಎನ್ ಸಿಸಿ ಬೆಟಾಲಿಯನ್ ಪಾರ್ಥಿವ ಸ್ವೀಕರಿಸಲಿದೆ. ಬಳಿಕ ಉಡುಪಿಯ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಪಾರ್ಥಿವ ರವಾನೆ ಮಾಡಲಾಗುವುದು. ನಾಳೆ ಬೆಳಗ್ಗೆ 9 ಗಂಟೆಗೆ ಉಡುಪಿ ಕುಂದಾಪುರದ ತೆಕ್ಕಟೆಯಿಂದ ಬೀಜಾಡಿವರೆಗೂ ಅಂತಿಮ ಯಾತ್ರೆ ನಡೆಯಲಿದೆ. ಕುಂದಾಪುರದ ಬೀಜಾಡಿಯಲ್ಲಿ ಸ್ವಗೃಹದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ. ಬಳಿಕ 11 ಗಂಟೆಗೆ ಬೀಜಾಡಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುವುದು. ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಗುವುದು.