ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನೂತನ ನಿರ್ದೇಶಕ ಕರುಣೇಂದ್ರ ಪೂಜಾರಿ ಹಾಗೂ ಜಯಕುಂದರ್ಗೆ ಅಭಿನಂದನೆ ಕಾರ್ಯಕ್ರಮ
ಬಂಟ್ವಾಳ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಗೆ ಶನಿವಾರ (ಡಿ.14) ನಡೆದ ಚುನಾವಣೆಯಲ್ಲಿ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಕರುಣೇಂದ್ರ ಪೂಜಾರಿ ಹಾಗೂ ಜಯಕುಂದರ್ ಅವರನ್ನು ಸಂಕ್ರಾಂತಿಯ ವಿಶೇಷ ಸೇವೆಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೇಲ್ದೋಡಿಯಲ್ಲಿ ಅಭಿನಂದಿಸಲಾಯಿತು.
ಕ್ಷೇತ್ರದ ತಂತ್ರಿಯವರಾದ ಶ್ರೀಪತಿ ಭಟ್ ಪುಂಚೋಡಿ, ಸ್ಥಳೀಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ ನೂಜಂತ್ತೋಡಿ, ಕೇಲ್ಡೋಡಿ ಗುತ್ತು ಕೋಟಿ ಪೂಜಾರಿ, ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ ಅಂಚನ್, ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಕೇಲ್ದೋಡಿ, ಸದಸ್ಯರಾದ ಯೋಗೀಶ್ ಪೂಜಾರಿ, ಯಶೋಧರ ಪೂಜಾರಿ, ಜನಾರ್ದನ ಪೂಜಾರಿ, ರವಿ ಪೂಜಾರಿ ಪಾಂಗಳ,ರಘ ಶಾಂತಿ,ಕೊರಗಪ್ಪ ಪೂಜಾರಿ,ಮಹಾಬಲ ಪೂಜಾರಿ, ಕೃಷ್ಣಪ್ಪ ಪೂಜಾರಿ, ಪಾತ್ರಿಗಳಾದ ನೋಣು ಯಾನೆ ನೋಣಯ್ಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.