ವಾಮಂಜೂರು: ಉಳಾಯಿಬೆಟ್ಟುವಿನಲ್ಲಿ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನಗಳನ್ನು ನೋಡ್ತಾ ಇದ್ದರೆ ಭಾರತ ಹಿಂದೂಸ್ತಾನವಲ್ಲವೇ ಎಂಬ ಶಂಕೆ ಉಂಟಾಗುತ್ತದೆ. ಉಳಾಯಿಬೆಟ್ಟುವಿನಲ್ಲಿ ಹಿಂದೂಗಳ ಮೇಲೆ ಮುಸ್ಲಿಮರೇ ದಾಳಿ ನಡೆಸಿದ್ದಾರೆ ಎಂಬುದು ತಿಳಿದಿರುವ ಸತ್ಯ. ಶಾಂತಿ ಬಯಸದ ಮುಸ್ಲಿಮರು ಹಿಂದೂಗಳ ಮೇಲೆ ನಿರಂತರ ದಾಳಿ ನಡೆಸಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಆದರೂ ಹಿಂದೂಗಳ ಮೇಲೆ ಲಾಠಿ ಬೀಸಿ ಬಂಧಿಸುವುದು ಎಲ್ಲಿಯ ನ್ಯಾಯ ಎಂದು ಹಿಂದೂ ಮುಖಂಡೆ ತೇಜಸ್ವಿನಿ ಗೌಡ ಪ್ರಶ್ನಿಸಿದ್ದಾರೆ.
ಅವರು ವಾಮಂಜೂರಿನ ಶ್ರೀರಾಮ ಮಂದಿರದಲ್ಲಿ ನಡೆದ ದತ್ತಮಾಲಾಧಾರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮಾತಾಡುತ್ತಿದ್ದರು.

IMG-20141208-WA0008
ಉಳಾಯಿಬೆಟ್ಟು ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನಾ ಮೆರವಣಿಗೆ ಸಂದರ್ಭ ಘರ್ಷಣೆ ನಡೆದಿದ್ದು, ಉಳಾಯಿಬೆಟ್ಟು ಬಳಿ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ತಡೆದ ಸಂದರ್ಭ ನೂಕುನುಗ್ಗಲು ಉಂಟಾಗಿ ಪೊಲೀಸರು ಲಾಠಿ ಛಾಜರ್್ ನಡೆಸಿದ್ದರು. ಈ ವೇಳೆ ಕಲ್ಲು ತೂರಾಟ ಕೂಡಾ ನಡೆದಿದ್ದು, ಮಹಿಳೆ ಸೇರಿದಂತೆ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯ ನೇತೃತ್ವ ವಹಿಸಿದ ಹಿಂಜಾವೇ ನಾಯಕ ಸತ್ಯಜಿತ್ ಸುರತ್ಕಲ್, ಜಗದೀಶ ಶೇಣವ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು.
ಈ ಘಟನೆಯ ಹಿನ್ನೆಲೆಯಲ್ಲಿ ತೇಜಸ್ವಿನಿ ಗೌಡ ಮತ್ತು ಗುರುಪುರ ರಾಜಶೇಖರಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿದ ಹಿಂದೂ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಘಟನೆಯನ್ನು ಖಂಡಿಸಿದ್ದಾರೆ. ಶಾಂತಿ ಕದಡಲು ಸಂಘಟನೆಯ ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಆಸ್ಪದ ನೀಡಬಾರದು ಎಂದು ಸಂಘಟನೆಗಳ ನಾಯಕರು ಮನವಿ ಮಾಡಿದ್ದಾರೆ.

By suddi9

Leave a Reply

Your email address will not be published. Required fields are marked *