Published On: Wed, Dec 11th, 2024

ಕಾರಿನ ಗಾಜು ಒಡೆದು ಚಿನ್ನಾಭರಣ, ಲ್ಯಾಪ್‌ಟಾಪ್ ಕಳವು, 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಕದ್ರಿ ಪೊಲೀಸ್​​ ತಂಡ

ಮಂಗಳೂರು: ಕಾರಿನ ಗಾಜು ಒಡೆದು ಚಿನ್ನಾಭರಣ ಮತ್ತು ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ. ಮಂಗಳೂರು ನಗರದ ಕಂಕನಾಡಿ‌ ಮಾರ್ಕೆಟ್ ಬಳಿ ಈ ಘಟನೆ ನಡೆದಿದೆ. ಘಟನೆ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಮಂಗಳೂರು ತಾಲೂಕಿನ ಅಡ್ಯಾರ್ ಪದವು ನ ಅಬ್ದುಲ್ ಅಕ್ರಮ್(33) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಕಳವು ಮಾಡಿದ ಚಿನ್ನಾಭರಣ,ಲ್ಯಾಪ್ ಟಾಪ್ ಸೇರಿದಂತೆ 7ಲಕ್ಷ 30 ಸಾವಿರ ಮೌಲ್ಯದ ಸೊತ್ತುಗಳು ವಶಪಡಿಸಿಕೊಳ್ಳಲಾಗಿದೆ.

ಕಂಕನಾಡಿ ಮಾರ್ಕೆಟ್ ಬಳಿ ನಿಲ್ಲಿಸಿ ಕ್ರೇಟಾ ಕಾರಿನ್ನು ನಿಲ್ಲಿಸಲಾಗಿತ್ತು. ಆರೋಪಿ ಅಬ್ದುಲ್ ಅಕ್ರಮ್ ಕಾರ್ ನ ಗ್ಲಾಸ್ ಒಡೆದು ಕಾರಿನೊಳಗಿದ್ದ ಚಿನ್ನಾಭರಣ, ಲ್ಯಾಪ್‌ಟಾಪ್ ಕದ್ದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಪಿ.ಎಸ್.ಐ ಉಮೇಶ್ ಕುಮಾರ್ ತಂಡ‌ ಆರೋಪಿಯನ್ನು ಬಂಧಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter