ಪೊಳಲಿ ಸರಕಾರಿ ಪ್ರೌಢಶಾಲೆ ಶಾಲೆಗೆ 10 ಲ್ಯಾಪ್ ಟಾಪ್ ನೀಡಿದ ಅಮೆರಿಕನ್ ಕಂಪನಿ
ಪೊಳಲಿ: ಅಮೆರಿಕನ್ ಕಂಪನಿ ಕೊಡ ಮಾಡಿರುವ 10 ಲ್ಯಾಪ್ ಟಾಪ್ ಗಳನ್ನು ಸರಕಾರಿ ಪ್ರೌಢಶಾಲೆ ಪೊಳಲಿಗೆ ನೀಡಲಾಗಿದೆ. ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಸವಿತಾ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ಇಲ್ಲಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಪಠ್ಯ ವಸ್ತುವಿನೊಂದಿಗೆ ತಂತ್ರಜ್ಞಾನ ಇತ್ತೀಚಿನ ದಿನಗಳಲ್ಲಿ ಅತಿ ಅವಶ್ಯಕವಾಗಿರುತ್ತದೆ. ನೀಡಿರುವ ಲ್ಯಾಪ್ ಟಾಪ್ ಗಳನ್ನು ಸದುಪಯೋಗ ಮಾಡಿ ಶಾಲೆಗೆ ಊರಿಗೆ ಗೌರವರಂತೆ ಹಾರೈಸಿದರು.
ಸರಕಾರಿ ಪ್ರೌಢಶಾಲೆ ಪೊಳಲಿಗೆ ಅಮೆರಿಕನ್ ಕಂಪನಿ ನೀಡಿರುವ 10 ಲ್ಯಾಪ್ ಟಾಪ್ ಗಳನ್ನು ನೀಡುವ ಕಾರ್ಯಕ್ರಮದಲ್ಲಿ, ಇನ್ನರ್ ವೀಲ್ ಕ್ಲಬ್ ನ ಕಾರ್ಯದರ್ಶಿಯಾದ ಶಿವಾನಿ ಬಾಳಿಗ ,ಜಿಲ್ಲಾ ಕಾರ್ಯದರ್ಶಿ ರಜನಿ ಭಟ್, ಜಿಲ್ಲಾ ಈ ಎಸ್ ಓ ಚೈತ್ರ ರಾವ್ ,ಖಜಾಂಚಿ ಭಾರತ ಪ್ರಕಾಶ ಸೀಮಾ ಸಿಂಗ್ ವೈ, ಸುನಂದ ಶಿವರಾಂ, ಶಮೀಮ್ ಕುನಿಲ್ ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸುಬ್ರಾಯ ಪೈ ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ಶಿವಾನಿ ಬಾಳಿಗ ಶಾಲೆಯ ಪ್ರಗತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳಿಗೆ ನೀಡಿದ ಸಹಾಯ ಗಮನಾರ್ಹವಾದುದು ಎಂದು ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ವೆಂಕಟೇಶನಾವಡ ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಉಮಾ ಧನ್ಯವಾದಗಳನ್ನು ಸಲ್ಲಿಸಿದರು. ರಂಜಿತಾ ಕಾರ್ಯಕ್ರಮ ನಿರೂಪಿಸಿದರು.