ಬದನಡಿ: ಸಂಭ್ರಮದ ಷಷ್ಠಿ ಮಹೋತ್ಸವ
ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಶನಿವಾರ ನಡೆಯಿತು.
ಬೆಳಿಗ್ಗೆ 5 ಗಂಟೆಗೆ ಉಷಾ ಪೂಜೆಯೊಂದಿಗೆ ಆರಂಭಗೊಂಡು ಬಳಿಕ ದೇವರಿಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ ನಡೆಯಿತು. ಇದೇ ವೇಳೆ ಸಾಮೂಹಿಕ ಆಶ್ಲೇಷಾ ಬಲಿ, ನಾಗಬ್ರಹ್ಮ ಸುಬ್ರಹ್ಮನ್ಯೇಶ್ವರ ಭಜನಾ ಮಂಡಳಿ ತಂಡದಿಂದ ನೃತ್ಯ ಭಜನೆ ಸಹಿತ ದೇವರ ಬಲಿ ಉತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಪರಿವಾರ ದೈವಗಳಾದ ರಕ್ತೇಶ್ವರಿ, ಕಲ್ಲುರ್ಟಿ, ಅಣ್ಣಪ್ಪ ಪಂಜುಲರ್ಿ ದೈವದ ನೇಮೋತ್ಸವ ನಡೆಯಿತು.
ದೇವಳದ ಪ್ರಧಾನ ಅರ್ಚಕ ಕೆ.ಸುಂದರ ರಾವ್, ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಆಡಳಿತಾಧಿಕಾರಿ ಪರೀಕ್ಷಿತ್ ಶೆಟ್ಟಿ, ಅರ್ಚಕ ನಾಗೇಶ ರಾವ್, ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ, ಅರಳ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಜಗದೀಶ ಆಳ್ವ ಅಗ್ಗೊಂಡೆ, ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಸದಸ್ಯ ರಶ್ಮಿತ್ ಶೆಟ್ಟಿ, ಉಷಾ ಸಂತೋಷ್ ಶಿವನಗರ, ಪ್ರಮುಖರಾದ ರಾಜಾ ಎಸ್.ಹೊಳ್ಳ, ಪ್ರಕಾಶ್ ಕುಮಾರ್ ಜೈನ್, ರವೀಂದ್ರ ಪೂಜಾರಿ, ಜಗದೀಶ ಕೊಯಿಲ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಶರತ್ ಕುಮಾರ್ ಕೊಯಿಲ, ರಾಜೇಶ ಗೋವಿಂದ ಬೆಟ್ಟ, ಆನಂದ ಬುರಾಲು, ಲೋಕೇಶ ಕೈತ್ರೋಡಿ, ಚಂದ್ರಶೇಖರ ಆಚಾರ್ಯ, ದಯಾನಂದ ಸಪಲ್ಯ, ದಿನೇಶ ಸುವರ್ಣ, ಭಜನಾ ಮಂಡಳಿ ಅಧ್ಯಕ್ಷ ಜನಾರ್ದನ ಕೋಟ್ಯಾನ್ ಮತ್ತಿತರರು ಇದ್ದರು.