ಶ್ರೀ ಕ್ಷೇತ್ರ ಬದನಡಿ: ಇಂದು ಷಷ್ಠಿ ಮಹೋತ್ಸವ
ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾಷರ್ಿಕ ಷಷ್ಠಿ ಮಹೋತ್ಸವವು ಇದೇ 7ರಂದು ಶನಿವಾರ ಕ್ಷೇತ್ರದ ತಂತ್ರಿ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಬೆಳಿಗ್ಗೆ 5 ಗಂಟೆಗೆ ಉಷಾ ಪೂಜೆ, 7ಗಂಟೆಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ, 8.30ಕ್ಕೆ ಭಜನೆ, 9ಗಂಟೆಗೆ ಸಾಮೂಹಿಕ ಆಶ್ಲೇಷಾ ಬಲಿ, 9. 15ಕ್ಕೆ ಸಜಂಕಬೆಟ್ಟು ಮನೆಯಿಂದ ದೈವದ ಭಂಡಾರ ಬರುವುದು, 9.30ರಿಂದ ದೇವರ ಬಲಿ ಉತ್ಸವ ಮತ್ತು ಷಷ್ಠಿ ಮಹೋತ್ಸವ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಮತ್ತು ಸಾರ್ವಜನಿಕಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4 ಗಂಟೆಗೆ ಗಂಟೆ ಭಜನೆ, ರಾತ್ರಿ 7 ಗಂಟೆಗೆ ದುಗರ್ಾ ನಮಸ್ಕಾರ ಪೂಜೆ, ರಾತ್ರಿ ಗಂಟೆ 7.30ಕ್ಕೆ ಪರಿವಾರ ದೈವಗಳಾದ ರಕ್ತೇಶ್ವರಿ, ಕಲ್ಲುಟರ್ಿ, ಅಣ್ಣಪ್ಪ ಪಂಜುಲರ್ಿ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.