ಡಾ.ಅಂಬೇಡ್ಕರ್ ರವರ 68ನೇ ಮಹಾಪರಿನಿರ್ವಾಹಣಾ ದಿನ ಸ್ಮರಣೆ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರೀಕ ಹಿತರಕ್ಷಣಾ ಯುವ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 68ನೇ ಮಹಾಪರಿನಿರ್ವಾಹಣಾ ದಿನ ಸ್ಮರಣೆ ಕಾರ್ಯಕ್ರಮವು ಶುಕ್ರವಾರ ಬಿ.ಸಿ.ರೋಡಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ಬೋಳಂತೂರು ಅವರ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಂಬೇಡ್ಕರ್ ಚಿಂತಕರಾದ ಹೊನ್ನಪ್ಪ ಕುಂದರ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಭಾವಚಿತ್ರಕ್ಕೆ ಮಾಲಾರ್ಪಣೆಗೈದರು.
ದಕ್ಷಿಣ ಕನ್ನಡ ಜಿಲ್ಲಾ ದಲಿತ ನಾಗರೀಕ ಹಿತರಕ್ಷಣಾ ಯುವ ವೇದಿಕೆ ಬಂಟ್ವಾಳ ಘಟಕದ ಅಧ್ಯಕ್ಷ ಕೆ. ಸತೀಶ್ ಅರಳ ಅವರು ಸಭಾಧ್ಯಕ್ಷತೆ ವಹಿಸಿದ್ದರು.ಪಿಲಾತಬೆಟ್ಟುಗ್ರಾಮ ಪಂಚಾಯತ್ ಅಧ್ಯಕ್ಷೆಶಾರದಾರತ್ನಾಕರ್ನಾಯ್ಕ,ಆದಿದ್ರಾವಿಡ ಸಮಾಜ ಸೇವಾ ಸಂಘದ ಬಂಟ್ವಾಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಧರ್ಣಪ್ಪ ಬಡಗಬೆಳ್ಳೂರು,ತುಳು ಸಾಹಿತಿಗಳಾದ ಸತೀಶ್ ಕಕ್ಕೆಪದವು ಅವರು ಉಪಸ್ಥಿತರಿದ್ದರು.
ಸಮಾಜದ ಮುಖಂಡರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ರವರಿಗೆ ನಮನಗಳನ್ನು ಸಲ್ಲಿಸಿದರು.
ಪ್ರೀತಿರಾಜ್ ದ್ರಾವಿಡ್ ಸ್ವಾಗತಿಸಿದರು.
ಅಭಿಲಾಷ್ ಕೃಷ್ಣಾಪುರ ವಂದಿಸಿದರು.