ಬಿ.ಸಿ.ರೋಡು: ಶ್ರೀರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆ
ಬಂಟ್ವಾಳ: ಹಿಂದು ಜಾಗರಣ ವೇದಿಕೆ, ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿಅಯೋಧ್ಯೆ ಶ್ರೀರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಪ್ರಯುಕ್ತಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಶುಕ್ರವಾರ ಬಿ.ಸಿ.ರೋಡಿನ ಶ್ರೀ ರಕೇಶ್ವರೀ ದೇವಸ್ಥಾನದ ಸಾನಿಧ್ಯದಲ್ಲಿನಡೆಯಿತು.
![](https://www.suddi9.com/wp-content/uploads/2024/12/IMG_20241206_185431-650x266.jpg)
ಉಪ್ಪಳ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಆಶೀರ್ವಚನ ಗೈದರು.ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕರಾದ ಲೋಕಯ್ಯ ಸೇರಾ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಖ್ಯಾತ ಯಕ್ಷಗಾನ ಕಲಾವಿದರಾದ ದಿನೇಶ್ ಕಾವಳಕಟ್ಟೆ ದಿಕ್ಕೂಚಿ ಭಾಷಣಗೈದರು.ಹಿ.ಜಾ.ವೇ.ಯ ಜಿಲ್ಲಾ ಪ್ರಮುಖರಾದಪ್ರಶಾಂತ್ ಕೆಂಪುಗುಡ್ಡೆ, ನರಸಿಂಹ ಮಾಣಿ, ಚಿದಾನಂದ ಕುಜೀಲ ಬೆಟ್ಟು , ತಿರುಲೇಶ್ ಬೆಳ್ಳೂರು ಸಹಿತ ಪದಾಧಿಕಾರಿಗಳು ಹಾಜರಿದ್ದರು.ಬೆಳಿಗ್ಗೆ ನಾಗಶ್ರೀ ಮಿತ್ರ ವೃಂದ ಕಮ್ಮಾಜೆ – ತೆಂಕಬೆಳ್ಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.
ಮಧ್ಯಾಹ್ನ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ಜರಗಿತು.