ಮಂಗಳೂರು: ತುಳುನಾಡಿನ ಸೊಸೆಯಾದ ಥೈಲ್ಯಾಂಡ್ ಯುವತಿ..!
ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಪ್ರೀತಿ, ಪ್ರೇಮ, ಮದುವೆಗೆ ಜಾತಿ, ದೇಶ, ಗಡಿಯ ಬೇಲಿ ಇಲ್ಲ ಎಂಬ ಮಾತನ್ನು ಕೇಳಿರುತ್ತೀರಿ ಅಲ್ವಾ. ಇದಕ್ಕೆ ನಿದರ್ಶನವೆಂಬಂತೆ ಮಂಗಳೂರಿನಲ್ಲೊಂದು ವಿದೇಶಿ ಪ್ರೇಮ -ವಿವಾಹದ ಕಥೆ ನಡೆದಿದ್ದು, ಮಂಗಳೂರಿನ ಪೃಥ್ವಿರಾಜ್ ಹಾಗೂ ಥೈಲ್ಯಾಂಡ್ ಪ್ರಜೆ ಮೊಂತಕಾನ್ ಸಸೂಕ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಇವರಿಬ್ಬರ ವಿವಾಹ ಕಾರ್ಯ ನಡೆದಿದೆ.
ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿಯಾಗಿರುವ ಪೃಥ್ವಿರಾಜ್ ಥೈಲ್ಯಾಂಡ್‌ಗೆ ಪ್ರವಾಸದ ನಿಮಿತ್ತ ಭೇಟಿ ನೀಡಿದಾದ ಮೊಂತಕಾನ್ ಸಸೂಕ್ ಅವರ ಪರಿಚಯವಾಗುತ್ತದೆ. ಈ ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಕುಟುಂಬಸ್ಥರನ್ನು ಕಳೆದ ಜುಲೈನಲ್ಲಿ ಥೈಲ್ಯಾಂಡ್ ನಲ್ಲಿ ವಿವಾಹ ಬೌದ್ಧ ಧರ್ಮದ ಸಂಪ್ರದಾಯದಂತೆ ವಿವಾಹವಾಗಿದ್ದರು. ಹಾಗೆಯೇ ಇಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಪೃಥ್ವಿರಾಜ್ ಹಾಗೂ ಥೈಲ್ಯಾಂಡ್ ಪ್ರಜೆ ಮೊಂತಕಾನ್ ಸಸೂಕ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.