ನೂತನ ಸದಸ್ಯರಿಗೆ ಅಭಿನಂದನೆ
ಬಂಟ್ವಾಳ : ಇಲ್ಲಿನ ಪುರಸಭೆಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ 11 ಸ್ಥಾನಗಳ ಸಹಿತ 12 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ 10 ಸ್ಥಾನಗಳನ್ನು ಗೆಲುವು ಸಾಧಿಸಿದ ನೂತನ ಸದಸ್ಯರು, ಮತದಾರರು, ಪಕ್ಷದ ನಾಯಕರು, ಕಾಯಕರ್ತರಿಗೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಮಾಜಿ ಸಚಿವ ಬಿ ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.ಬಂಟ್ವಾಳ ಪುರಸಭೆಯ ನೂತನ ಸದಸ್ಯ ಪುರುಷೋತ್ತಮ ಎಸ್ ಬಂಗೇರ ಸಹಿತ ಗ್ರಾಮ ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ಕೋಟೆ-ನಂದಾವರ, ಧನಂಜಯ ಶೆಟ್ಟಿ ಹಾಗೂ ಸೆಲಿನ್, ರಾಜೇಶ್ ಗೌಡ, ಕೇಶವ, ನಳಿನಿ, ಕೇಶವ ಜೋಗಿ, ಎನ್ ಅಬ್ದುಲ್ ಕರೀಂ, ಜಯಂತಿ ಸತೀಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಪದ್ಮಶೇಖರ ಜೈನ್, ಬೇಬಿ ಕುಂದರ್, ಯೂಸುಫ್ ಕರಂದಾಡಿ, ಜನಾರ್ದನ ಚೆಂಡ್ತಿಮಾರ್, ಇಬ್ರಾಹಿ ಮಂಚಿ, ಮುಹಮದ್ ನಂದಾವರ, ಸುರೇಶ್
ಜೋರಾ, ಶಮೀರ್ ನಂದಾವರ ಮೊದಲಾದವರು ಭಾಗವಹಿಸಿದ್ದರು.