ಉಡುಪಿ – ಕಾಸರಗೋಡು 440 ಕೆ. ವಿ.ವಿದ್ಯುತ್ ಲೈನ್ ವಿರೋಧಿಸಿ ರೈತರಿಂದ ಸಾಮೂಹಿಕ ಮನವಿಗೆ ತೀರ್ಮಾನ
ಬಂಟ್ವಾಳ: ಉಡುಪಿ – ಕಾಸರಗೋಡು440 ಕೆ. ವಿ.ವಿದ್ಯುತ್ ಲೈನ್ ವಿರೋಧಿಸಿರೈತರಿಂದ ಸಾಮೂಹಿಕ ಮನವಿಗೆ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ರೈತ ಮುಖಂಡರು, ಸಂತ್ರಸ್ತ ಭೂಮಾಲೀಕರ ಸಮಾಲೋಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ ಕಾಸರಗೋಡು ಮಧ್ಯೆ ಹಾದು ಹೋಗಲಿರುವ 440 ಕೆ.ವಿ. ವಿದ್ಯುತ್ ಲೈನ್ ಯೋಜನೆ ಜಿಲ್ಲೆಯ 20 ಗ್ರಾಮಗಳ ರೈತರ ಕೃಷಿ ಭೂಮಿ ಮೂಲಕ ಹಾದು ಹೋಗಲ್ಲಿದ್ದು, ರೈತರ ಸಮಕ್ಷಮದಲ್ಲಿ ಸಾಧಕ-ಬಾಧಕ ವಿಮರ್ಷಿಸುವಂತೆ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆಯು ಲೋಕಾಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸುವುದೆಂದು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿತಿಳಿಸಲಾಗಿದೆ.
ಈ ಸಂದರ್ಭ ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಬೈಲುಗುತ್ತು ಶ್ರೀಧರ ಶೆಟ್ಟಿ, ರಾಜ್ಯ ಕಾರ್ಯದರ್ಶಿ ನಡಿ ಕಂಬಳಗುತ್ತು ಮನೋಹರ ಶೆಟ್ಟಿ, ಬಂಟ್ವಾಳ ತಾಲೂಕು ರೈತ ಸಂಘ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ಮಾಜಿ ಮಂಡಲ ಪ್ರಧಾನ ಮರುವ ಮಹಾಬಲ ಭಟ್ ,ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುದೇಶ ಮಯ್ಯ,ಉಡುಪಿ ಜಿಲ್ಲಾ ರೈತ ಪ್ರತಿನಿಧಿ ಚಂದ್ರಹಾಸ ಶೆಟ್ಟಿ, ಅಮರ್, ವಿಟ್ಲ ಚಿತ್ತರಂಜನ್, ರಾಜೀವ ಗೌಡ,ಸಜಿಪ ನಡುಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮನಾಥ ಭಂಡಾರಿ ಹಾಗೂ ಜಿಲ್ಲೆಯ ರೈತ ಮುಖಂಡರು, ಭೂಮಾಲಿಕರು ಉಪಸ್ಥಿತರಿದ್ದರು