ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ ವತಿಯಿಂದ “ಅರೋಮ” ಆಹಾರ ಮೇಳವು ನಡೆಯಿತು.ಆಹಾರ ಮೇಳದ ಉದ್ಘಾಟನೆಯನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ಪ್ರೊ.ಎ.ಪಿ.ಭಟ್ ಅವರು ಉದ್ಘಾಟಿಸಿದರು.


ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ.ಪಿ.ಎಸ್ ಐತಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಕ್ರೀಯಾಶೀಲತೆಯನ್ನು ಶ್ಲಾಘಿಸಿದರು.ಈ ಸಂದರ್ಭದಲ್ಲಿ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ CA ಟಿ ಪ್ರಶಾಂತ್ ಹೊಳ್ಳ,ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ ಜೆ, ಉಪ ಪ್ರಾಂಶುಪಾಲರಾದ ವಿನಾಯಕ ಪೈ, ಕಾರ್ಯಕ್ರಮದ ಸಂಯೋಜಕರಾದ ದಿನೇಶ್ ಮತ್ತು ವಾಣಿಜ್ಯ ಸಂಘದ ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವ್ಯವಹಾರದ ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ಆಯೋಜಿಸಿದ ಆಹಾರ ಮೇಳದಲ್ಲಿ 12 ಮಳಿಗೆಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು.ವಿದ್ಯಾರ್ಥಿಗಳು ಬಗೆ ಬಗೆಯ ಖಾದ್ಯ,ತಂಪು ಪಾನೀಯ,ಐಸ್ ಕ್ರೀಮ್ ಗಳನ್ನು ವ್ಯಾಪಾರಮಾಡಿ ಗಮನ ಸೆಳೆದರು.


ಒಂದು ದಿನದ ಆಹಾರ ಮೇಳದಲ್ಲಿ ಸುಮಾರು 3 ಲಕ್ಷ ವಹಿವಾಟು ನಡೆಯಿತು.ಮತ್ತು 2000 ಕ್ಕೂ ಮಿಕ್ಕಿ ಜನರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *