ಗುಮ್ಮಲ ಡ್ಯಾಂನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಸಾವು
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಗುಮ್ಮಲ ಡ್ಯಾಂನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಇವರನ್ನು ಬೆಳ್ವೆಯ ಗುಮ್ಮಲ ಶ್ರೀಶ (13) , ಜಯಂತ್ (19) ಎಂದು ಗುರುತಿಸಲಾಗಿದೆ. ಭಾನುವಾರ ರಜೆ ಇದ್ದ ಕಾರಣ ಗೆಳೆಯರ ಜೊತೆ ಡ್ಯಾಂಗೆ ಈಜಲು ಹೋಗಿದ್ದ ಶ್ರೀಶ ಮತ್ತು ಜಯಂತ್ ಹೋಗಿದ್ದಾರೆ. ಈ ವೇಳೆ ಇಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವುನ್ನಪ್ಪಿದ್ದಾರೆ. ಇದೀಗ ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.