Published On: Tue, Dec 3rd, 2024

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀಮತಿ ಕೆ. ಈ ದೇವಕಿಯವರಿಗೆ ಸಿಬ್ಬಂದಿ ವರ್ಗದವರಿಂದ ಸನ್ಮಾನ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀಮತಿ ಕೆ. ಈ ದೇವಕಿಯವರು ಬೆಂಜನಪದವಿನಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸಿ ನವೆಂಬರ್ 30 ಕ್ಕೆ ನಿವೃತ್ತಿ ಹೊಂದಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಡಿಸೆಂಬರ್ 2 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಪೂವಪ್ಪ ಕುಲಾಲ್ , ದೇವಕಿಗೆ ಸನ್ಮಾನ

ಶ್ರೀಯುತ ಪೂವಪ್ಪ ಕುಲಾಲ್ ಇವರ ಧರ್ಮಪತ್ನಿಯಾದ ತಾವು ಮೈಸೂರು ಗುಂಡ್ಲು ಪೇಟೆ ತಾಲೂಕು ಕಬ್ಬಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವರ್ಷ ಕಿರಿಯ ಆರೋಗ್ಯ ಸಹಾಯಕಿಯಾಗಿ, ತದನಂತರ ಇಲ್ಲಿಯವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಜನಪದವು ಇಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಹಗಲಿರುಳು ಎನ್ನದೆ ಜನರ ಆರೋಗ್ಯದ ಕಾಳಜಿ ವಹಿಸಿದ್ದಾರೆ.

ಅನೇಕ ವೈದ್ಯಕೀಯ ಶಿಬಿರದ ಮುಂದಾಳತ್ವ ವಹಿಸಿ, ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು. ಅದಲ್ಲದೇ, ಆಶಾ ಕಾರ್ಯಕರ್ತೆಯರನ್ನು ಒಗ್ಗೂಡಿಸಿ ಗ್ರಾಮದಲ್ಲಿ ಅನೇಕ ವ್ಯಾಕ್ಸಿನೇಷನ್ ಶಿಬಿರ ನಡೆಸಿ ಗ್ರಾಮದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರನ್ನು ಪ್ರಾಥಮಿಕ ಆರೋಗ್ಯದ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಹಾಗೂ ಊರಿನವರೋಂದಿಗೆ ಸೇರಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್‌ ಆರ್ ತಿಮ್ಮಯ್ಯ ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಕುಮಾರ್ ರೈ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾಕ್ಟರ್ ದೀಪ ಪ್ರಭು ಜಿಲ್ಲಾ ಕುಷ್ಟರೋಗ ನಿವಾರಣ ಅಧಿಕಾರಿ ಡಾಕ್ಟರ್ ಸುದರ್ಶನ್ ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ ಕುಲಾಲ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ಮಹಮ್ಮದ್ ತುಪೇಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮೊಹಮ್ಮದ್ ದಾನೀಶ್ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾ ಲೋಕೇಶ್ ಅಮ್ಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಧಾಕೃಷ್ಣ ತಂತ್ರಿ ಕರಿಯಾಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಾಜು ಜಿ ಕೋಟ್ಯಾನ್ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಯಶವಂತ್ ಮಾಜಿ ಮಂಡಲ ಪ್ರದಾನ ಜಯರಾಮ್ ಕೃಷ್ಣ ‌ ,ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ,ಸುಕೇಶ್‌ ಚೌಟ, ಯಶೋಧರ ಪೊಳಲಿ ಕಲ್ಕುಟ, ಬಸೀರ್‌ ಬಡಕಬೈಲ್‌ , ಚರಣ್‌ ಕೃಷ್ಣನಗರ, ಇಬ್ರಾಹಿಂ ನವಾಜ್‌ , ಚಂದ್ರಶೇಖರ ಶೆಟ್ಟಿ, ಹರಿಪ್ರಸಾದ್‌ ರೈ ಗ್ರಾಮ ಪಂಚಾಯತ್‌ ಸದಸ್ಯರು, ಅಂಗನವಾಡಿ ಶಿಕ್ಷಕಿಯರು ಮತ್ತಿತರರು ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter