ಕಲ್ಲಡ್ಕ ರೈ. ಸೇ. ಸ. ಸಂಘದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ
ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತದ ೨೦೨೪-೨೦೨೯ ನೇ ಸಾಲಿನ ಆಡಳಿತಮಂಡಳಿಗೆ ನೂತನ ಅಧ್ಯಕ್ಷರಾಗಿ ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ ಅವರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಲೋಕಾನಂದ ರವರು ಅಯ್ಕೆಯಾಗಿದ್ದಾರೆ ಎಂದು ನಿಯಮಿತದ ಪ್ರಕಟಣೆ ತಿಳಿಸಿದೆ.
ಗುರುವಾರ ನಿಯಮಿತದ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.ಉಳಿದಂತೆ ನೂತನ ನಿರ್ದೇಶಕರಾದ ಜಯರಾಮ ರೈ,ಸುರೇಶ್ ಶೆಟ್ಟಿ,ಚಂದ್ರಶೇಖರ ಟೈಲರ್,ಕೊರಗಪ್ಪ ಗೌಡ,ಎಂ.ಆರ್ .ನೋಣಯ್ಯ,ಕೊರಗಪ್ಪ ನಾಯ್ಕ,ಪ್ರಭಾಕರ ಶೆಟ್ಟಿ,ಅಜಿತ್ ಎಂ.,ಮಹಾಬಲ ಸಾಲಿಯಾನ್, ಅರುಣಾ ಭಟ್,ವಿಜಯಾಪ್ರಕಾಶ್ ಉಪಸ್ಥಿತರಿದ್ದರು.