ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳ
ಉಡುಪಿ:ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ ವತಿಯಿಂದ ದಿನಾಂಕ 29.11.2024 ಶುಕ್ರವಾರ ದಂದು ಕಾಲೇಜು ಕ್ಯಾಂಪಸ್ ನಲ್ಲಿ “ಅರೋಮ” ಆಹಾರ ಮೇಳ ಮತ್ತು ವ್ಯವಹಾರ ದಿನ ನಡೆಯಲಿದೆ.
ಕಾಲೇಜು ವಿದ್ಯಾರ್ಥಿಗಳು ಸ್ವತಃ ಅಂಗಡಿಗಳನ್ನು ಇಟ್ಟು ಬಗೆ ಬಗೆಯ ಖಾದ್ಯಗಳನ್ನು ಮಾರಾಟ ಮಾಡಲಿದ್ದಾರೆ.

ವಿದ್ಯಾರ್ಥಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ತಂಡದ ವ್ಯವಸ್ಥಾಪನ ಕೌಶಲ್ಯಗಳನ್ನು ಕಲಿಯುವುದು ಮತ್ತು ವ್ಯವಹಾರದ ತಂತ್ರಗಳು ಮತ್ತು ಲಾಭದಾಯಕತೆಯ ಕುರಿತು ಪ್ರಾಯೋಗಿಕ ಜ್ಞಾನವನ್ನು ನೀಡುವುದು ಈ ಆಹಾರ ಮೇಳದ ಉದ್ದೇಶವಾಗಿದೆ.