ಮೂಡುಬಿದರೆ: ಮಾಜಿ ಸೈನಿಕರ ವೇದಿಕೆ ಮೂಡುಬಿದರೆ ಇದರ ವತಿಯಿಂದ ಬೆಳುವಾಯಿ ಮುಕ್ತಾನಂದ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ `ಭಾರತೀಯ ಸೇನೆ ಹಾಗೂ ದೇಶಭಕ್ತಿ’ ಬಗ್ಗೆ ಕಾರ್ಯ ಗಾರ ನಡೆಯಿತು.
ವೇದಿಕೆಯ ಅಧ್ಯಕ್ಷ ರಾಮಚಂದ್ರ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾಯರ್ಾಗಾರದಲ್ಲಿ ಸೇನಾ ನೇಮಕಾತಿ ವಿಧಾನ ಹಾಗೂ ಮಕ್ಕಳ ಸುರಕ್ಷ ಸಪ್ತಾಹ ಬಗ್ಗೆ ವೇದಿಕೆಯ ಸದಸ್ಯ ನವಾನಂದ ಮಾಹಿತಿ ನೀಡಿದರು. ಸೇನೆಗೆ ಸೇರುವುದರಿಂದ ಬದುಕು ಕಟ್ಟಿಕೊಳ್ಳಬಹುದು. ದೇಶಭಕ್ತಿಯೊಂದಿಗೆ ನೀಡಿದ ಕೆಲಸವನ್ನು ಸೇನೆಯಲ್ಲಿ ಶ್ರದ್ಧೆ ನಿಷ್ಠೆಯಿಂದ ಮಾಡಬೇಕಾಗುತ್ತದೆ.
mbd_dec7_2(a)

ಮಾನಸಿಕ-ದೈಹಿಕ ಕ್ಷಮತೆ ಸೈನ್ಯಕ್ಕೆ ಮುಖ್ಯ. ವಿದ್ಯಾರ್ಥಿಗಳು ಮಾಧ್ಯಮಗಳಿಂದ ವಯಸ್ಸಿಗೆ ಮೀರಿದ ವಿಷಯಗಳನ್ನು ಆಯ್ಕೆ ಮಾಡಬಾರದು. ಪತ್ರಿಕೆಗಳು ಪ್ರಕಟಿಸುವ ವಿದ್ಯಾರ್ಥಿ  ಆವೃತಿಗಳು ಜ್ಞಾನವನ್ನು ವೃದ್ಧಿಸುತ್ತದೆ. ಸುಜ್ಞಾನವನ್ನು ಪಡೆಯುವುದರ ಮೂಲಕ ನಕಾರತ್ಮಕ ವಿಷಯಗಳಿಂದ ದೂರವಿರಬಹುದು ಎಂದು ಹೇಳಿದರು.
ವೇದಿಕೆಯ ನಿರ್ದೇಶಕ ಅಂತೋನಿ ಮಾರ್ಯಾನ್ ಡೆನ್ನಿಸ್ ಸೇನೆಯಲ್ಲಿರುವ ಅವಕಾಶಗಳ ಬಗ್ಗೆ ಮಾತನಾಡಿ, ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳೂ ಹಂತಹಂತವಾಗಿ ಶೈಕ್ಷಣಿಕ ಸಾಧನೆ ಮಾಡಿ ಸೇನೆಯಲ್ಲಿ ಉನ್ನತ ಹುದ್ದೆಗಳಿಗೆ ಸೇರಬಹುದು ಎಂದರು.

ಎನ್ಸಿಸಿ ಎ ಸರ್ಟಿಫಿಕೇಟ್ ಉತೀರಾರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಮಾಜಿ ಸೈನಿಕ ಜಯಶೆಟ್ಟಿ ಸೇನಾ ಸೌಲಭ್ಯ ಹಾಗೂ ಜಲಸೇನೆ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯ ಉಪಾಧ್ಯಕ್ಷ ರಾಮಕೃಷ್ಣ ಶೆಣೈ, ಶಾಲಾ ಮುಖ್ಯ ಶಿಕ್ಷಕ ಸದಾಶಿವ ಶೆಟ್ಟಿ, ಶಾಲಾ ಎನ್ಸಿಸಿ ಅಧಿಕಾರಿ ದೇವದಾಸ್ ಕಿಣಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *