ಮೂಡುಬಿದಿರೆ: ಪೇಟೆಯಲ್ಲಿ ಅಧಿಕವಾಗುತ್ತಿರುವ ವಾಹನ ದಟ್ಟಣೆಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಸ್ವರಾಜ್ ಮೈದಾನದಿಂದ ಬೆಳ್ಮಣ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಲ್ಪಿಸಲು 4.95 ಕೋಟಿ ರೂ ವೆಚ್ಚದಲ್ಲಿ ನಿಮರ್ಾಣಗೊಳ್ಳುತ್ತಿರುವ 3 ಕಿಮೀ ರಿಂಗ್ ರೋಡ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರು ಶನಿವಾರ ಸ್ವರಾಜ್ ಮೈದಾನದಲ್ಲಿ ಶಂಕು ಸ್ಥಾಪನೆಗೈದರು.
ನಂತರ ಮಾತನಾಡಿದ ಅವರು ಬೆಳೆಯುತ್ತಿರುವ ಮೂಡುಬಿದಿರೆಗೆ ಬೈಪಾಸ್ ರಸ್ತೆಯ ಅಗತ್ಯವಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು ಮುಂದೆ ಮೆಡಿಕಲ್ ಕಾಲೇಜು ಬರುವ ನಿರೀಕ್ಷೆಯಲ್ಲಿದೆ. ಈ ಎಲ್ಲಾ ಸಮಸ್ಯೆಗಳನ್ನು ಅರಿತು ರಾಜ್ಯ ಸರಕಾರವು ಅನುದಾನವನ್ನು ಮಂಜೂರುಗೊಳಿಸಿದ್ದು ಇದೀಗ ಬೈಪಾಸ್ ರಸ್ತೆಗೆ ಬದಲಾಗಿ ವತರ್ುಲ ರಸ್ತೆ ನಿಮರ್ಾಣಕ್ಕೆ ಶಂಕು ಸ್ಥಾಪನೆಯನ್ನು ಮಾಡಲಾಗಿದೆ. ಇದಕ್ಕೆ 2014-15ನೇ ಸಾಲಿನ ಅಪೆಂಡಿಕ್ಸ್ “ಇ” ಬಜೆಟ್ನ್ನು ಜೋಡಣೆ ಮಾಡಲಾಗಿದೆ. ಮುಂದೆ ಇದನ್ನು ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಗೆ ಹಸ್ತಾಂತರಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ 34 ಕೋಟಿ ರೂ ರಸ್ತೆ ಅಭಿವೃದ್ಧಿಗೆ ಮತ್ತು 54 ಕೋಟಿ ರೂ ನೀರಾವರಿಗೆ ಖಚರ್ು ಮಾಡಲಾಗಿದೆ. ಇದರಲ್ಲಿ ಮಳವೂರು ಮತ್ತು ಕಿನ್ನಿಗೋಳಿ ವೆಂಟೆಡ್ ಡ್ಯಾಮ್ ಕೂಡ ಒಳಗೊಂಡಿದೆ. ವತರ್ುಲ ರಸ್ತೆ ಡಾಮರೀಕರಣಗೊಂಡು ಪೂರ್ಣಗೊಳ್ಳಲು ಒಂದು ವರ್ಷ ತಗಲಬಹುದಾದರೂ ಕಾರ್ಕಳ ಬಾಹುಬಲಿ ಮಸ್ತಕಾಭಿಷೇಕ ಮೊದಲು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
3ಕಿಮೀ ಉದ್ದ, 3.95 ಕೋಟಿ ಅನುದಾನ: ಸ್ವರಾಜ್ ಮೈದಾನದಿಂದ ಕಡಲಕೆರೆ ಮೂಲಕ ಬೆಳ್ಮಣ್ ಮುಖ್ಯ ರಸ್ತೆಯನ್ನು ಸಂಪಕರ್ಿಸುವ ವತರ್ುಲ ರಸ್ತೆಯ ಒಟ್ಟು ವಿಸ್ತೀರ್ಣ ಸುಮಾರು 3.16ಕಿಮೀ ಆಗಿದ್ದು ಯೋಜನಾ ವೆಚ್ಚ 4.85 ಕೋಟಿ ರೂ ಆಗಿರುತ್ತದೆ. ಚರಂಡಿ ಸೇರಿ ರಸ್ತೆಯ ಒಟ್ಟು ಅಗಲ 12 ಮೀಟರ್ ಆಗಿದ್ದು 7 ಮೀಟರ್ ಅಗಲದಲ್ಲಿ ಡಾಮರೀಕರಣವಾಗಲಿದೆ. ಕಾಮಗಾರಿ ಪೂರ್ಣಗೊಳ್ಳುವ ಅವಧಿ 12ರಿಂದ 18 ತಿಂಗಳುಗಳಾಗಿರುತ್ತದೆ ಎಂದು ಪಿಡಬ್ಯುಡಿ ಇಂಜಿನಿಯರ್ ಹರೀಶ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್,ಮುಖ್ಯಾಧಿಕಾರಿ ಶೀನ ನಾಯಕ್, ಮೇಘನಾಥ ಶೆಟ್ಟಿ, ವಕೀಲ ಬಾಹುಬಲಿ ಪ್ರಸಾದ್, ಸಂಪತ್ ಸಾಮ್ರಾಜ್ಯ ಮತ್ತಿತರರು ಇದ್ದರು.
ಪುರಸಭೆ ಕಂದಾಯ ನಿರೀಕ್ಷಕ ಧನಂಜಯ್ ಸ್ವಾಗತಿಸಿ ಅವರು ಪ್ರಸತಾವಿಕವಾಗಿ ಮಾತನಾಡಿ 1992ರಲ್ಲಿ ಆಗಿನ ಶಾಸಕ ಸೋಮಪ್ಪ ಸುವರ್ಣ ವತರ್ುಲ ರಸ್ತೆಗೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದರೆ ಮಾಜಿ ಸಚಿವ ಅಮರನಾಥ ಶೆಟ್ಟಿ ಅದರ ಫಾಲೊಅಪ್ ನಡೆಸಿದರು. 2014ರಲ್ಲಿ ಸಚಿವ ಅಭಯಚಂದ್ರ ಸರಕಾರದಿಂದ ಯೋಜನೆ ಮಂಜೂರಾತಿ ಮಾಡಿಸುವಲ್ಲಿ ಸಫಲರಾದರು ಎಂದರು.
