ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಶ್ರಮದಾನ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗದ ಸದಸ್ಯರು ಬಂಟ್ವಾಳ ತಾಲೂಕಿನ ಕಾಡಬೆಟ್ಟು ಅಂತರಂಗಡಿಯಿಂದ ಕಾಡಬೆಟ್ಟು ಕೊಡಮಣಿತ್ತಾಯ ಪಂಜುರ್ಲಿ ದೈವಸ್ಥಾನದ ವರೆಗೆ ರಸ್ತೆ ಬದಿ ಬೆಳೆದ ಹುಲ್ಲು, ಗಿಡ ಗಂಟೆಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿದರು.
ಈ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್, ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀಧರ ಪೈ, ನೀಲಪ್ಪ ಪೂಜಾರಿಅವರು ಭಾಗವಹಿಸಿ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರು.
ಶ್ರಮದಾನದಲ್ಲಿ ಶೌರ್ಯ ಘಟಕ ಕಾಡಬೆಟ್ಟು ವಗ್ಗದ ಸಂಯೋಜಕಿ ರೇಖಾ.ಪಿ,ಘಟಕ ಪ್ರತಿನಿಧಿ ಪ್ರವೀಣ್, ಸದಸ್ಯರುಗಳಾದ ಸಂಪತ್ ಶೆಟ್ಟಿ,ಮಹಾಬಲ ರೈ,
ನಾರಾಯಣ್ ಶೆಟ್ಟಿ, ಲಕ್ಷ್ಮಣ್,, ಭಾಗವಹಿಸಿದ್ದರು.