29 ಸದಸ್ಯರ ರಾಜ್ಯ ಸಮಿತಿ ರಚನೆ : ಕಾಮ್ರಡ್ ಪಿ.ಪಿ. ಅಪ್ಪಣ್ಣ ಅಧ್ಯಕ್ಷ, ಕಾಮೆಡ್ ಮೈತ್ರೇಯಿ ಕಾರ್ಯದರ್ಶಿ
ಬಂಟ್ವಾಳ : ಎರಡು ದಿನಗಳ ಕಾಲ ಬಿ.ಸಿ.ರೋಡಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ 29 ಮಂದಿ ಸದಸ್ಯರ ರಾಜ್ಯ ಸಮಿತಿಯನ್ನು ಪ್ರತಿನಿಧಿಗಳು ಚುನಾಯಿಸಿದರು. ಕಾಂ. ಪಿ ಪಿ ಅಪ್ಪಣ್ಣ ಅವರನ್ನು ಅಧ್ಯಕ್ಷರಾಗಿ ಹಾಗೂ ಕಾಂ. ಮೈತ್ರೇಯಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಳಿಸಲಾಯಿತು.
ಸಮ್ಮೇಳನದಲ್ಲಿ ಸಂಘಟನೆಯ ದಸ್ತಾವೇಜಿನ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ಸುಮಾರು 40 ಪ್ರತಿನಿಧಿಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಮುಂದಿಟ್ಟಿದ್ದು, ಸಂಘಟನೆಯ ದಸ್ತಾವೇಜನ್ನು ಅಧಿವೇಶನದಲ್ಲಿ ಅನುಮೋದಿಸಲಾಯಿತು. ಕ್ರಾಂತಿಕಾರಿ ಕಾರ್ಮಿಕರ ಸಂಘಟನೆಯನ್ನು ಬೆಳೆಸಲು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದಲ್ಲದೆ, ತಮ್ಮ ಆರ್ಥಿಕ ಕಲ್ಯಾಣಕ್ಕಲ್ಲದೆ ವಸತಿ ಹಕ್ಕು, ಮಕ್ಕಳ ಶಿಕ್ಷಣ, ಅರೋಗ್ಯ ಭದ್ರತೆ, ಘನತೆಗಾಗಿ ನಾವು ಹೋರಾಟಗಳನ್ನು ರೂಪಿಸಬೇಕು ಎಂದು ರಾಷ್ಟ್ರೀಯಾಧ್ಯಕ್ಷ ಕಾಂ. ವಿ ಶಂಕರ್ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಎಐಸಿಸಿಟಿಯು ಪ್ರಧಾನ ಕಾರ್ಯದರ್ಶಿ ಕಾಮೆಡ್ ರಾಜೀವ್ ಡಿಮಿ ಅವರು ಮಾತನಾಡಿ, ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಕಾರ್ಮಿಕರ ಮಧ್ಯೆ ಪರ್ಯಾಯವಾಗಿ ಬೆಳೆಯುವುದಲ್ಲದೆ, ವಿಸ್ತಾರವಾದ ಕೆಲಸಗಳನ್ನು ಪ್ರಾರಂಭಿಸಬೇಕು. ಫ್ಯಾಶಿಸಂ ವಿರುದ್ಧ ಸಂಘಟಿತರಾಗಲು ಮತ್ತು ಕಾರ್ಪೋರೇಟ್ ಪರ ಸರ್ಕಾರಗಳ ನೀತಿಗಳ ವಿರುದ್ಧ ಹೆಚ್ಚೆಚ್ಚು ಕಾರ್ಮಿಕರನ್ನು ಸಂಘಟಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಕೇಂದ್ರ ಸರ್ಕಾರ ಹೊರಡಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು, ಕರ್ನಾಟಕ ಸರ್ಕಾರವು ಕಾರ್ಮಿಕ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಲು, ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು, ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಮತ್ತು ಘನತೆಯುಕ್ತ ಕೆಲಸದ ವಾತಾವರಣ ಕಲ್ಪಿಸಲು ಎಐಸಿಸಿಟಿಯು ಸಜ್ಜಾಗುತ್ತಿದೆ ಎಂಬ ಘೋಷಣೆಯೊಂದಿಗೆ ಪ್ರಥಮ ರಾಜ್ಯ ಸಮ್ಮೇಳನ ಮುಕ್ತಾಯ ಕಂಡಿತ