ಪಣೋಲಿಬೈಲು ಕ್ಷೇತ್ರದಲ್ಲಿ ವಾರ್ಷಿಕ ಕೋಲ
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ದಪಣೋಲಿಬೈಲು ಕಲ್ಲುರ್ಟಿ ಕಲ್ಕುಡ ಕ್ಷೇತ್ರದಲ್ಲಿ ವಾರ್ಷಿಕ ಕೋಲದ ಪ್ರಯುಕ್ತ ಬೆಳಿಗ್ಗೆ ವಿವಿಧ ವೈಧಿಕ ವಿಧಿ ವಿಧಾನಗಳು ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ನವಕ ಕಲಶಪ್ರದಾನ, 12 ತೆಂಗಿನಕಾಯಿ ಗಣಹೋಮ, ನಾಗ ತಂಬಿಲವು ನೆರವೇರಿತು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ,ಭಜನಾ ಸಂಕೀರ್ತನೆ, ಸಂಜೆ ಪಣೋಲಿಬೈಲು ಶ್ರೀಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ಬಳಿಕ ಮೆರವಣಿಗೆ, ಸ್ಥಳೀಯ ಪ್ರತಿಭೆ ಗಳಿಂದ ಸಾಂಸ್ಕೃತಿಕ ವೈವಿಧ್ಯ, ಗೀತ ಸಾಹಿತ್ಯ ಸಂಭ್ರಮ, ಭಂಡಾರದಮನೆಯಿಂದ ದೈವಗಳ ಭಂಡಾರ ಬಂದು ಕ್ಷೇತ್ರದ ಕಲ್ಲುರ್ಟಿ-ಕಲ್ಲುಡ ದೈವಗಳ ಕೋಲ ನಡೆಯಿತು.
ಕ್ಷೇತ್ರದ ಆಡಳಿತ ಅಧಿಕಾರಿ,ಒಂದನೇ ಮೂಲ್ಯರಾದ ವಾಸುದೇವ ಮೂಲ್ಯ, ಎರಡನೇ ಮೂಲ್ಯಾದ ನಾರಾಯಣ ಮೂಲ್ಯ, ಮೂರನೇ ಮೂಲ್ಯರಾದ ಮೋನಪ್ಪ ಮೂಲ್ಯ, ನಗ್ರಿಗುತ್ತುಜಯ ಶೆಟ್ಟಿ, ನಿಲ್ಯ ಚಂದ್ರಶೇಖರ ಶೆಟ್ಟಿ, ರಮೇಶ್ ಕುಲಾಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಸಾವಿರಾರು ಮಂದಿ ಕ್ಷೇತ್ರಕ್ಕಾಮಿಸಿ ದೈವಗಳ ದರ್ಶನಗೈದು ಗಂಧಪ್ರಸಾದ ಸ್ವೀಕರಿಸಿದರು