ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರಿಬ್ಬರಿಗೆ ಬೀಳ್ಕೋಡುಗೆ
ಬಂಟ್ವಾಳ: ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಾಸ್ತಾನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಭಾರತಿ, ಪಂಜಿಕಲ್ಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವಿನೋಧಿನಿ ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಬಿ.ಸಿ.ರೋಡಿನ ಸಿ.ಡಿ.ಪಿ.ಒ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಸಿ.ಡಿ.ಪಿ.ಒ.ಮಮ್ತಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರ ಮಾರ್ಗದರ್ಶನ ,ಅನುಭವ ಇಂದಿನ ದಿನಗಳಲ್ಲಿ ಬಹಳ ಅತ್ಯವಶ್ಯಕವಾಗಿದೆ.ಕಾರ್ಯಕರ್ತೆರಾಗಿದ್ದ
ಭಾರತಿ ಮತ್ತು ವಿನೋಧಿನಿ ಅವರು ಸರಕಾರಿ ಸೇವೆಯ ಬಳಿಕವೂ ಸಮಾಜ ಸೇವೆ ತೊಡಗಿಸುತ್ತಿರುವುದು ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ವಲಯ ಮೇಲ್ವಿಚಾರಕಿ ನೀತಾ ಕುಮಾರಿ ಡಿ ಅವರು ಸ್ವಾಗತಿಸಿದರು.ಮೇಲ್ವಿಚಾರಕಿ ಯಶೋಧ ಪಿ.ವಂದಿಸಿದರು.