Published On: Mon, Nov 18th, 2024

ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಪಾದುಕಾನ್ಯಾಶ

ಬಡಗಬೆಳ್ಳೂರು:ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ʼಪಾದುಕಾನ್ಯಾಶ” ಕಾರ್ಯಕ್ರಮವು ಕ್ಷೇತ್ರದ ತಂತ್ರೀಗಳಾದ ವಿಷ್ಣು ಮೂರ್ತಿತಂತ್ರೀ ನೇತೃತ್ವದಲ್ಲಿ ಸೋಮವಾರ ನೆರವೇರಿತು.

ಬೆಳಿಗ್ಗೆ ಘಂಟೆ 10:50ರ ಮಕರ ಲಗ್ನ ಸುಮೂಹೂರ್ತದಲ್ಲಿ ನೇರವೇರಿದ ʼಪಾದುಕಾನ್ಯಾಶ” ಕಾರ್ಯಕ್ರಮದಲ್ಲಿ ವಾಸ್ತು ಶಿಲ್ಪಿ ಪಳನಿ ಸ್ವಾಮಿ ಕಟೀಲು , ಗುರು ಭಟ್‌, ರಾಧಕೃಷ್ಣ ಆಳ್ವ ಅಮ್ಮುಂಜೆ( ಬಡಗಬೆಳ್ಳೂರು) ಕ್ಷೇತ್ರದ ಅರ್ಚಕರಾದ ರಮೇಶ್‌ ಪೂಜಾರಿ, ಕ್ಷೇತ್ರದ ಸಂದೀಪ್‌, ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.)ಇದರ ಸದಸ್ಯರು , ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಡಿ. 8 ರಂದು ಭಾನುವಾರ ನಿಧಿಕುಂಭ ನೆರವೇರಲಿದೆ . ಈ ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖೈಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.)

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter