ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಾಲೆತ್ತೂರು ಶಾಖೆಯ ಉದ್ಘಾಟನೆ
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಾಲೆತ್ತೂರು ಶಾಖೆಯನ್ನು ಸೋಮವಾರ ಸಂಘದ ಅಧ್ಯಕ್ಷರು,ಮಾಜಿ ಸಚಿವರಾದ ಬಿ ರಮಾನಾಥ ರೈ ರವರು ಉದ್ಘಾಟಿಸಿದರು.
ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಎಂ.ಇಬ್ರಾಹಿಂ ಗಣಕೀಕರಣವನ್ನುಉದ್ಘಾಟಿಸಿದರು, ಮಿತ್ತನಡ್ಕ ಶ್ರೀ ಮಲರಾಯ ದೈವಸ್ಥಾನ ಇದರ ಆಡಳಿತ ಮೊಕ್ತೇಸರರಾದ ಶ್ರೀತಿರುಮಲೇಶ್ವರಭಟ್ಭದ್ರತಾಕೊಠಡಿಯನ್ನುಉದ್ಘಾಟಿಸಿ ಶುಭಹಾರೈಸಿದರು.
ನಿತ್ಯಧರ್ ಮಾತೆ ಚರ್ಚ್ ಸಾಲೆತ್ತೂರು ಇದರ ಧರ್ಮಗುರುಗಳಾದ ರೆ.ಫಾ.ಅಂಟೋನಿ ಬ್ರಿಟ್ಟೋ ಆರ್ಶೀವಚಿಸಿದರು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಕೆ ಹಾಗೂ ಸಂಘದ ನಿರ್ದೇಶಕರು,ಸಂಘದ ಸಿಇಒ ಬೇಬಿಕುಂದರ್ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಎಂ.ಎಸ್. ಮಹಮ್ಮದ್ ಸ್ವಾಗತಿಸಿದರು, ಚಂದ್ರಪ್ರಕಾಶ್ ಶೆಟ್ಟಿ ವಂದಿಸಿದರು